Kannada Duniya

How to stay happy:ನೀವು ಜೀವನದಲ್ಲಿ ಸಂತೋಷವಾಗಿರಬೇಕಾದರೆ ಈ ವಿಚಾರಗಳನ್ನೆಲ್ಲ ಬಿಟ್ಟಾಕಿ!

ಎಲ್ಲರೂ ಜೀವನದಲ್ಲಿ ಸಂತೋಷವಾಗಿರಲು ಸಾಧ್ಯವಿಲ್ಲ. ಜೀವನದಲ್ಲಿ ಸುಖ, ದುಃಖಗಳು ಆಗಾಗ ಬಂದು ಹೋಗುತ್ತಿರುತ್ತದೆ. ಅಂದ ಮಾತ್ರಕ್ಕೆ ಅದರ ಬಗ್ಗೆ ಯೋಚಿಸುತ್ತಾ ಕುಳಿತುಕೊಳ್ಳಬಾರದು. ಇದರಿಂದ ನಿಮಗೆ ಜೀವನದಲ್ಲಿ ಜಿಗುಪ್ಸೆ ಮೂಡಬಹುದು. ಹಾಗಾಗಿ ನಿಮಗೆ ಜೀವನದಲ್ಲಿ ಬೇಸರ ಮೂಡಿಸುವಂತಹ ಈ ವಿಚಾರಗಳ ಬಗ್ಗೆ ಯೋಚಿಸಬೇಡಿ.

 

-ನೀವು ಭೂತಕಾಲದಲ್ಲಿ ನಡೆದ ವಿಚಾರಗಳ ಬಗ್ಗೆ ಯೋಚಿಸಬೇಡಿ. ನೀವು ಪದೆ ಪದೇ ಭೂತಕಾಲದ ಬಗ್ಗೆ ಯೋಚಿಸುತ್ತಾ ಕುಳಿತರೆ ನಿಮಗೆ ವರ್ತಮಾನದ ಸಂತೋಷ ಸಿಗುವುದಿಲ್ಲ. ಹಾಗಾಗಿ ಪರಿಸ್ಥಿತಿಗೆ ಹೊಂದಿಕೊಂಡು ಜೀವನ ನಡೆಸಿ.

 

-ನಿಮಗೆ ಜೀವನದಲ್ಲಿ ಕೆಲವೊಂದು ವಿಚಾರದಲ್ಲಿ ಅತೃಪ್ತ ಭಾವನೆ ಕಾಡುತ್ತಿರುತ್ತದೆ. ಅದರ ಬಗ್ಗೆ ಯೋಚಿಸುತ್ತಾ ಕುಳಿತುಕೊಳ್ಳಬೇಡಿ. ಇದರಿಂದ ನಿಮ್ಮ ಒತ್ತಡ ಹೆಚ್ಚಾಗುತ್ತದೆ.

 

-ಜೀವನದಲ್ಲಿ ನೀವು ನಿಮ್ಮ ಬಗ್ಗೆ ಮಾತ್ರ ಯೋಚಿಸಿ.  ಅವರು ಎಲ್ಲಾ ಸೌಕರ್ಯ ಹೊಂದಿದ್ದಾರೆ, ಎಷ್ಟು ಚೆನ್ನಾಗಿದ್ದಾರೆ ಎಂದು ಬೇರೆಯವರ ಬಗ್ಗೆ ಯೋಚನೆ ಮಾಡುತ್ತಿರಬೇಡಿ. ನಿಮ್ಮಲ್ಲಿರುವ ಬಗ್ಗೆ ಖುಷಿ ಪಡಿ. ಇದರಿಂದ ಜೀವನ ಚೆನ್ನಾಗಿರುತ್ತದೆ.

 

Impress Girls: ಹುಡುಗಿಯರನ್ನು ಇಂಪ್ರೆಸ್ ಮಾಡೋದು ಹೇಗೆ ?

-ನಿಮ್ಮ ಜೀವನದಲ್ಲಿ ನೀವು ಎಲ್ಲವನ್ನೂ ನಿಯಂತ್ರಿಸಲು ಪ್ರಯತ್ನಿಸಬೇಡಿ. ಆಗ ನಿಮ್ಮ ನಿಯಂತ್ರಣಕ್ಕೆ ಯಾವುದೂ ಸಿಗದಿದ್ದಾಗ ಆ ಬಗ್ಗೆ ಯೋಚಿಸುತ್ತಾ, ಜೀವನದಲ್ಲಿ ಅಮೂಲ್ಯವಾದ ಸಮಯವನ್ನು ಕಳೆದುಕೊಳ್ಳುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...