Kannada Duniya

ಬೆಸ್ಟ್ ಹನಿಮೂನ್ ‘ಸ್ಪಾಟ್’ ಯಾವುದು ಗೊತ್ತಾ.?

ಹನಿಮೂನ್ ಅಂದ್ರೇನೆ ಸ್ಪೆಷಲ್. ಹಾಗಾಗಿ ಸುಂದರ ಜಾಗಕ್ಕೆ ಹೋಗಬೇಕು ಅನ್ನೋ ಆಸೆ ನವ ದಂಪತಿಗಳಿಗೆ. ಭಾರತದಲ್ಲಿ ಬೆಸ್ಟ್ ಹನಿಮೂನ್ ಸ್ಪಾಟ್ ಯಾವುದು ಗೊತ್ತಾ? ಕೇರಳ. ಟ್ರಾವೆಲ್ ವೆಬ್ ಸೈಟ್ ಒಂದು ಜನರ ಅಭಿಪ್ರಾಯ ಸಂಗ್ರಹಿಸಿದ್ದು, ಅತಿ ಹೆಚ್ಚು ಜನ ಕೇರಳವೇ ಬೆಸ್ಟ್ ಅಂತಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಕೃತಿ ಸೌಂದರ್ಯಕ್ಕೆ ಮತ್ತೊಂದು ಹೆಸರೇ ಕೇರಳ. ಇಲ್ಲಿನ ವಾತಾವರಣ, ಆಚಾರ ವಿಚಾರ, ಆಹಾರ ಪದ್ಧತಿ ಎಲ್ಲವೂ ವಿಭಿನ್ನವಾಗಿದೆ, ಹಾಗಾಗಿ ಕೇರಳ ಭಾರತೀಯರನ್ನು ಮಾತ್ರವಲ್ಲ ವಿದೇಶೀ ಜೋಡಿಗಳನ್ನು ಕೂಡ ಸೆಳೆಯುತ್ತಿದೆ.

ಪ್ರವಾಸಿಗರಿಗೆ ಇಷ್ಟವಾಗುವಂತಹ ತಾಣಗಳು, ಯುವ ಜೋಡಿ ಕಣ್ತುಂಬಿಕೊಳ್ಳಬಹುದಾದ ಜಾಗಗಳು ಕೇರಳದಲ್ಲಿವೆ. ಕೇರಳದಲ್ಲಿ ಸುತ್ತಾಡೋದು ನವ ದಂಪತಿಗಳಿಗೆ ರೊಮ್ಯಾಂಟಿಕ್ ಅನುಭವವೇ ಸರಿ. ಕೇರಳ ಅತ್ಯುತ್ತಮ ಹನಿಮೂನ್ ಸ್ಪಾಟ್ ಎನಿಸಿಕೊಂಡ್ರೆ, ಸಿಂಗಾಪುರ ಪ್ರವಾಸಿಗರು ಭೇಟಿ ನೀಡಬಹುದಾದ ಬೆಸ್ಟ್ ದೇಶ ಎಂಬ ಗೌರವಕ್ಕೆ ಪಾತ್ರವಾಗಿದೆ. ಹಾಂಕಾಂಗ್ ಬೆಸ್ಟ್ ಸಿಟಿ ಹಾಗೂ ಸ್ವಿಡ್ಜರ್ಲೆಂಡ್ ಬೆಸ್ಟ್ ಫ್ಯಾಮಿಲಿ ಡೆಸ್ಟಿನೇಶನ್ ಎನಿಸಿಕೊಂಡಿದೆ.

ಆನ್‌ಲೈನ್‌ನಲ್ಲಿ ಹೆಚ್ಚಿನ ಸುದ್ದಿಗಳಿಗಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನಂದಿಸಿ !!!


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...