Kannada Duniya

ಬ್ರೇಕ್ ಅಪ್ ಆದ ಮೇಲೆ ಹುಡುಗರು ಈ ಎರಡು ಮಾರ್ಗದಲ್ಲಿ ಒಂದನ್ನು ಆಯ್ಕೆ ಮಾಡಿ

ಪ್ರೀತಿಯು ಒಂದು ಉತ್ತಮವಾದ ಸಂಬಂಧವಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿ ತನ್ನ ಸಂತೋಷ, ನೆಮ್ಮದಿಯನ್ನು ಕಂಡುಕೊಳ್ಳುತ್ತಾನೆ. ಆದರೆ ಅದೇ ಪ್ರೀತಿ ದೂರವಾದರೆ ವ್ಯಕ್ತಿ ತುಂಬಾ ದುಃಖಪಡುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ಹುಡುಗರು ಈ ಎರಡಲ್ಲಿ ಒಂದು ಮಾರ್ಗವನ್ನು ಆಯ್ಕೆ ಮಾಡಿ.

ಮೊದಲನೇಯ ಮಾರ್ಗವೆಂದರೆ ಬ್ರೇಕ್ ಅಪ್ ಆದ ಮೇಲೆ ನಿಮ್ಮೊಳಗೆ ಮೂಡುವಂತಹ ನಕರಾತ್ಮಕತೆ ನಿಮ್ಮಲ್ಲಿರುವ ಸಕರಾತ್ಮಕ ಭಾವನೆಯನ್ನು ನಾಶ ಮಾಡುತ್ತದೆ. ಇದರಿಂದ ನಿಮ್ಮೊಳಗೆ ದ್ವೇಷ ಹುಟ್ಟಿಕೊಳ್ಳುತ್ತದೆ. ಇದು ಒಂದು ಕಹಿಯಾದ ಭಾವನೆಯಾಗಿದೆ. ಆದರೆ ಇದು ವ್ಯಕ್ತಿಯ ಜೀವನವನ್ನು ಕತ್ತಲೆಯೊಳಗೆ ಕರೆದುಕೊಂಡು ಹೋಗುತ್ತದೆ. ಇದರಿಂದ ಇಡೀ ಜೀವನ ನಾಶವಾಗುತ್ತದೆ.

ಎರಡನೇಯ ಮಾರ್ಗವೆಂದರೆ ನಿಮ್ಮ ಜೀವನದಲ್ಲಿ ಈ ಹಿಂದೇ ಏನೇ ಘಟಿಸಿದರೂ ಅದು ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವುದು. ಅಂದರೆ ನೀವು ಹಿಂದಿನದನ್ನು ಕನಸೆಂದು ಮರೆತು ಮುಂದಿನ ನಿಮ್ಮ ಗುರಿಯತ್ತ ಸಾಗುವುದು. ಇದು ಸಿಹಿಯಾದ ಭಾವನೆಯಾಗಿದೆ. ಇದು ನಿಮ್ಮ ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ. ಇದರಿಂದ ನಿಮ್ಮ ಜೀವನವು ಸಂತೋಷವಾಗಿರುತ್ತದೆ.

ಹಾಗಾಗಿ ಹುಡುಗರು ಜೀವನವನ್ನು ಹಾಳುಮಾಡುವಂತಹ ಮೊದಲ ಮಾರ್ಗ ಉತ್ತಮವೇ? ಅಥವಾ ಜೀವನವನ್ನು ಉದ್ಧಾರ ಮಾಡುವಂತಹ ಎರಡನೇ ಮಾರ್ಗ ಉತ್ತಮವೇ? ಎಂಬುದನ್ನು ಆಯ್ಕೆ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...