Kannada Duniya

ಬೇರೆಯವರೊಂದಿಗೆ ಹೋಲಿಸಿಕೊಂಡು ಕೊರಗಬೇಡಿ…!

ನಾವು ಯಾವತ್ತೂ ನಮ್ಮ ಬಳಿ ಇರುವುದಕ್ಕಿಂತ ಇನ್ನೊಬ್ಬರ ಬಳಿ ಇರುವುದರ ಕುರಿತೇ ಯೋಚಿಸುತ್ತೇವೆ. ಇದರಿಂದ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತೇವೆ. ಇದರಿಂದ ನಮ್ಮಲ್ಲಿ ಕೀಳರಿಮೆ ಬೆಳೆಯುತ್ತದೆ. ಹಾಗಾಗಿ ಇದನ್ನು ನಿವಾರಿಸಿಕೊಳ್ಳುವುದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.

ನಾನು ದಪ್ಪಗಿದ್ದೇನೆ, ನನ್ನ ಮುಖ ಚೆನ್ನಾಗಿಲ್ಲ, ನಾನು ಅವರಷ್ಟು ಎತ್ತರಕ್ಕೆ ಇರಬೇಕಿತ್ತು ಹೀಗೆ ಏನೇನು ಯೋಚನೆ ಮಾಡುತ್ತಿರುತ್ತೇವೆ. ಇದರಿಂದ ಮನಸ್ಸು ಹಾಳಾಗುವುದು ಅಲ್ಲದೇ ನಮ್ಮ ಮೇಲೆಯೇ ನಮಗೆ ನಂಬಿಕೆ ಹೋಗುತ್ತದೆ.

ಹಾಗಾಗಿ ನಾವು ಹೇಗೆ ಇದ್ದರೂ ಚೆನ್ನಾಗಿ ಇದ್ದೇವೆ ಎಂಬ ಭಾವನೆ ಇರಬೇಕು. ಹಾಗೇ ನಮ್ಮನ್ನು ನಾವು ಪ್ರೀತಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು.

ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬೇಡಿ. ನಾವು ಮಾಡುವ ಮೊದಲ ತಪ್ಪು ಎಂದರೆ ನಮ್ಮನ್ನು ಬೇರೆಯವರ ಜತೆ ಹೋಲಿಸಿಕೊಳ್ಳುವುದು. ಅವರು ಚೆನ್ನಾಗಿದ್ದಾರೆ, ನಾನು ಕಪ್ಪಗಿದ್ದೇನೆ, ನನ್ನ ಡ್ರೆಸ್ ಚೆನ್ನಾಗಿಲ್ಲ ಹೀಗೆ ಏನೇನೂ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತೇವೆ. ಇದರ ಬದಲು ನಾವು ಯಾರಿಗೂ ಕಡಿಮೆ ಇಲ್ಲ ಎಂಬ ಭಾವವನ್ನು ಮನಸ್ಸಿನಲ್ಲಿ ಮೂಡಿಸಿಕೊಂಡರೆ ಆಗ ಆತ್ಮವಿಶ್ವಾಸ ಖಂಡಿತವಾಗಿಯೂ ಬರುತ್ತದೆ.

ಸೌಂದರ್ಯಕ್ಕಿಂತ ಗುಣ ಮುಖ್ಯವಾಗಿರುವುದರಿಂದ ಆದಷ್ಟು ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಆಂತರ್ಯದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. ಇದು ನಿಮ್ಮ ಮುಖದಲ್ಲಿ ವಿಶೇಷ ಕಳೆಯನ್ನು ತಂದುಕೊಡುತ್ತದೆ.

This article give idea do not compare with others and degrade your self


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...