Kannada Duniya

ರಾತ್ರಿ ಮಲಗುವಾಗ ಅಥವಾ ಬೆಳಿಗ್ಗೆ ಎದ್ದಾಗ, ಯಾವ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಒಳ್ಳೆಯದು?

ಕೆಲವು ಪುರುಷರು ಮತ್ತು ಮಹಿಳೆಯರು ಪ್ರತಿದಿನ ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆ. ಆದರೆ ಕೆಲವರಿಗೆ ಅದರ ಬಗ್ಗೆ ಹೆಚ್ಚು ಆಸಕ್ತಿ ಇರುವುದಿಲ್ಲ. ಹಾಗಾಗಿ ಲೈಂಗಿಕ ಬಯಕೆ ಒಬ್ಬರಿಂದ ಇನ್ನೊಬ್ಬರಲ್ಲಿ ವಿಭಿನ್ನವಾಗಿರುತ್ತದೆ. ಆದರೆ ನೀವು ಬೆಳಿಗ್ಗೆ ಅಥವಾ ರಾತ್ರಿಯ ಸಮಯದಲ್ಲಿ ಲೈಂಗಿಕತೆ ಹೊಂದಿದ್ದರೆ ಒಳ್ಳೆಯದು ಎಂಬುದನ್ನು ತಿಳಿಯಿರಿ.

ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರ ಪ್ರಕಾರ ಮಹಿಳೆಯರು ಸಂಜೆಯ ವೇಳೆ ಸೆಕ್ಸ್ ಡ್ರೈವ್ ಹೆಚ್ಚಾಗಿದ್ದರೆ ಪುರುಷರಿಗೆ ಬೆಳಿಗ್ಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇರುತ್ತದೆ. ಕೆಲವರು ಮಲಗುವ ಮುನ್ನ ಲೈಂಗಿಕತೆ ಹೊಂದಲು ಬಯಸುತ್ತಾರೆ ಎಂಬುದಾಗಿ ತಿಳಿದುಬಂದಿದೆ.

ಆದರೆ ತಜ್ಞರು ತಿಳಿಸಿದ ಪ್ರಕಾರ, ರಾತ್ರಿ ಮಲಗುವ ವೇಳೆ ಲೈಂಗಿಕತೆ ಹೊಂದಿದ್ದರೆ ಅದು ಹೆಚ್ಚು ತೃಪ್ತಿ ನೀಡುವುದಿಲ್ಲವಂತೆ. ಯಾಕೆಂದರೆ ಆ ಸಮಯದಲ್ಲಿ ಇಡೀ ದಿನ ಕೆಲಸ ಮಾಡಿ ಸುಸ್ತಾಗಿರುತ್ತದೆ. ಆದರೆ ಬೆಳಿಗ್ಗೆ ದೇಹದಲ್ಲಿ ಶಕ್ತಿ, ಉಲ್ಲಾಸ ಹೆಚ್ಚಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಲೈಂಗಿಕತೆ ಹೊಂದಿದ್ದರೆ ಹೆಚ್ಚು ಆನಂದ ಸಿಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...