Kannada Duniya

Vastu Tips: ಹೀಗೆಯೇ ಇರಲಿ ನಿಮ್ಮ ಮನೆಯ ದೇವರ ಕೋಣೆ…!

ಹಿಂದೂ ಧರ್ಮವನ್ನ ನಂಬುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನೆಯಲ್ಲಿ ದೇವರಿಗೆ ಒಂದು ಕೋಣೆಯನ್ನ ಮೀಸಲಿಡ್ತಾನೆ. ಅಲ್ಲದೇ ಅದು ಆ ಮನೆಯ ಮಹತ್ವಪೂರ್ಣ ಭಾಗವೂ ಹೌದು. ಆದರೆ ಪೂಜೆ ಮಾಡುವ ನಿಮ್ಮ ಸ್ಥಳವನ್ನ ಸರಿಯಾಗಿ ಇಟ್ಟುಕೊಂಡಲ್ಲಿ ಮಾತ್ರ ದೇವರು ಪ್ರಸನ್ನನಾಗುತ್ತಾನೆ ಅನ್ನುತ್ತೆ ವಾಸ್ತುಶಾಸ್ತ್ರ.

ವಾಸ್ತುಶಾಸ್ತ್ರದ ಅನುಸಾರ ದೇವರ ಕೋಣೆಯ ಮುಖ ಉತ್ತರ ದಿಕ್ಕಿಗೆ ಇರಬೇಕು. ಉತ್ತರ ದಿಕ್ಕಿನಲ್ಲಿ ದೇವರು ವಾಸ ಮಾಡ್ತಾನೆ ಅಂತಾ ಹೇಳಲಾಗುತ್ತೆ. ಹೀಗಾಗಿ ಉತ್ತರ ದಿಕ್ಕು ದೇವರ ಕೋಣೆಗೆ ಸೂಕ್ತ ಅಂತ ಹೇಳಲಾಗುತ್ತೆ.

ಮನೆಯಲ್ಲಿ ದೇವರ ಕೋಣೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅದರ ಅಕ್ಕಪಕ್ಕದಲ್ಲಿ ಎಲ್ಲೂ ಸ್ನಾನ ಗೃಹ ಹಾಗೂ ಶೌಚಾಲಯ ಬಾರದಂತೆ ನೋಡಿಕೊಳ್ಳಿ. ಅಲ್ಲದೇ ನಿಮ್ಮದು ಎರಡಂತಸ್ತಿನ ಮನೆಯಾಗಿದ್ದಲ್ಲಿ ದೇವರ ಕೋಣೆಯ ಮೇಲೂ ಸ್ನಾನಗೃಹ, ಶೌಚಾಲಯ ಬಾರದಂತೆ ನೋಡಿಕೊಳ್ಳಬೇಕು.

ಈ ಗುಣವಿರುವ ಹೆಂಡತಿಯನ್ನು ಪಡೆದ ಪುರುಷರು ಅದೃಷ್ಟವಂತರು…!

ದೇವರ ಕೋಣೆಯಲ್ಲಿ ಅಪ್ಪಿತಪ್ಪಿಯೂ ಬಿರುಕುಬಿಟ್ಟ ದೇವರ ಮೂರ್ತಿ ಅಥವಾ ಫೋಟೋವನ್ನ ಇಡಲು ಹೋಗಲೇಬೇಡಿ. ಇಂತಹ ಮೂರ್ತಿ ನಿಮ್ಮ ಮನೆಯಲ್ಲಿ ಇದ್ದರೆ ಮೊದಲು ಅದನ್ನ ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಿ.

ಕೆಲವರು ತಮ್ಮ ಮನೆಯಲ್ಲಿ ಶಿವಲಿಂಗವನ್ನ ಸ್ಥಾಪನೆ ಮಾಡುತ್ತಾರೆ. ಆದರೆ ವಾಸ್ತುಶಾಸ್ತ್ರದ ಪ್ರಕಾರ ಇದು ತಪ್ಪು. ಶಿವಲಿಂಗ ಯಾವತ್ತಿದ್ದರೂ ದೇವಸ್ಥಾನದಲ್ಲೇ ಇರಬೇಕು. ಹಾಗೂ ಮನೆಗಳಲ್ಲಿ ಶಿವನ ಫೋಟೋವನ್ನ ಇಟ್ಟು ಆರಾಧಿಸಬೇಕು.

ಗಣಪತಿಯನ್ನ ಸರ್ವಪ್ರಥಮ ದೇವರು ಅಂತಾ ಹೇಳ್ತಾರೆ. ಹೀಗಾಗಿ ಯಾವುದೇ ಶುಭಕಾರ್ಯಕ್ಕೂ ಮುನ್ನ ಗಣಪತಿ ಪೂಜೆ ಮಾಡಲಾಗುತ್ತೆ. ಆದರೆ ಮನೆಯಲ್ಲಿ ನೀವು ಇಟ್ಟಿರೋ ಗಣಪತಿಯ ಮುಖ ಉತ್ತರ ದಿಕ್ಕಿನಲ್ಲಿ ಇದೆಯಾ ಅನ್ನೋದನ್ನ ಖಚಿತ ಪಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಗಣಪತಿಯ ಮುಖ ಪೂರ್ವ ಇಲ್ಲವೇ ಪಶ್ಚಿಮ ದಿಕ್ಕಿನಲ್ಲಿ ಇರಬಾರದು.

ದೇವರ ಕೋಣೆಯ ವಸ್ತುಗಳನ್ನ ಇಡೋಕೆ ಕಪಾಟನ್ನ ಮಾಡಿದ್ರೆ ಅದಕ್ಕೆ ಒಂದು ಬಾಗಿಲು ಇರಬಾರದು. ಅದಕ್ಕೆ ಎರಡು ಬಾಗಿಲು ಇಡುವ ವ್ಯವಸ್ಥೆ ಮಾಡೋಕೆ ಮರೆಯದಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...