Kannada Duniya

ಗಣಪತಿ ಈ ರೂಪದಲ್ಲಿ ಕಂಡರೆ ಏನರ್ಥ ಗೊತ್ತಾ…?

ಮಲಗಿದ್ದಾಗ ಕನಸು ಬೀಳುತ್ತದೆ. ಈ ಕನಸಿನಲ್ಲಿ ವ್ಯಕ್ತಿ, ಪ್ರಾಣಿಗಳು, ಪಕ್ಷಿಗಳು, ವಸ್ತುಗಳು ಕಾಣಿಸುತ್ತದೆ. ಸಪ್ನ ಶಾಸ್ತ್ರದಲ್ಲಿ ಇವುಗಳಿಗೆ ಒಂದೊಂದು ಅರ್ಥವನ್ನು ನೀಡಲಾಗಿದೆ. ಹಾಗೇ ಕನಸಿನಲ್ಲಿ ಕೆಲವೊಮ್ಮೆ ದೇವರು ಕಾಣಿಸುತ್ತಾನೆ. ಹಾಗಾದ್ರೆ ಕನಸಿನಲ್ಲಿ ಗಣೇಶನನ್ನು ಕಂಡರೆ ಏನರ್ಥ ಎಂಬುದನ್ನು ತಿಳಿದುಕೊಳ್ಳೋಣ.

*ಕನಸಿನಲ್ಲಿ ಸಂತೋಷದ ಭಂಗಿಯಲ್ಲಿ ಗಣಪತಿಯನ್ನು ನೋಡಿದರೆ ಜೀವನದಲ್ಲಿ ನಿಮಗೆ ಒಳ್ಳೆಯ ದಿನಗಳು ಬರಲಿವೆ ಎಂದರ್ಥ.

*ಗಣಪತಿಯು ನಿಮಗೆ ಆಶೀರ್ವಾದ ಮಾಡುತ್ತಿರುವುದು ಕಂಡರೆ ಜೀವನದಲ್ಲಿ ಎದುರಾದ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದರ್ಥ.

* ಗಣಪತಿ ಇಲಿಯ ಮೇಲೆ ಕುಳಿತಿರುವ ರೂಪ ಕಂಡರೆ ನಿಮ್ಮ ಜೀವನದಲ್ಲಿ ಹೊಸ ತಿರುವು ಕಂಡಬರುತ್ತದೆ ಎಂದರ್ಥ.

ಕೌಟುಂಬಿಕ ಕಲಹವನ್ನು ಹೋಗಲಾಡಿಸಲು ಕೇಸರಿ ಮತ್ತು ನೀರಿನಿಂದ ಈ ಪರಿಹಾರಗಳನ್ನು ಮಾಡಿ…!

*ಗಣಪತಿಯ ವಿಗ್ರಹ ಛಿದ್ರವಾಗಿರುವುದು ಕಂಡರೆ ಮುಂದಿನ ದಿನಗಳಲ್ಲಿ ನಿಮಗೆ ನೀವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತೀರಿ ಎಂದರ್ಥ.

*ಗಣಪತಿ ತಾಂಡವ ಮಾಡುತ್ತಿರುವುದು ಕಂಡುಬಂದರೆ ಅದು ಅಶುಭ. ಆಗ ನೀವು ಗಣಪತಿಯ ಸ್ತೋತ್ರವನ್ನು ನಿಯಮಿತವಾಗಿ ಪಠಿಸಿಬೇಕು ಇದರಿಂದ ನಿಮ್ಮ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...