Kannada Duniya

ಮಹಾಶಿವರಾತ್ರಿಯಂದು ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ

ಮಾರ್ಚ್ 8 ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನ ಶಿವ ಮತ್ತು ಪಾರ್ವತಿ ವಿವಾಹವಾದರೆಂದು ಹೇಳಲಾಗುತ್ತದೆ. ಆದರೆ ಈ ವರ್ಷ ಮಹಾಶಿವರಾತ್ರಿಯ ದಿನ ಸರ್ವಾಥಸಿದ್ಧಿ ಯೋಗ, ಸಿದ್ಧಯೋಗ, ಶಿವಯೋಗ ರೂಪುಗೊಳ್ಳಲಿದೆ. ಇದರಿಂದ ಈ ದಿನ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ.

ವೃಷಭ ರಾಶಿ : ಈ ದಿನ ವೃಷಭ ರಾಶಿಯವರಿಗೆ ಮಂಗಳಕರವಾಗಲಿದೆ. ಇವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿದೆ. ಈ ರಾಶಿಯವರು ಶಿವನ ಆಶೀರ್ವಾದ ಪಡೆಯುತ್ತಾರೆ. ಇವರ ಇಷ್ಟಾರ್ಥಗಳು ಈಡೇರಲಿದೆ.

ಸಿಂಹ ರಾಶಿ : ನಿಮ್ಮ ಎಲ್ಲಾ ಆಸೆಗಳು ಈಡೇರಲಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಒಳ್ಳೆಯ ಉದ್ಯೋಗವಕಾಶಗಳು ಕೂಡಿಬರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನ ಮಾನ, ಪ್ರತಿಷ್ಠೆ ಹೆಚ್ಚಾಗಲಿದೆ.

ತುಲಾ ರಾಶಿ : ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಹಣಕ್ಕೆ ಸಂಬಂಧಿಸಿದ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರಿ. ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರುತ್ತದೆ. ನಿಮ್ಮ ಗೌರವ ಹೆಚ್ಚಾಗುತ್ತದೆ.

ಕುಂಭ ರಾಶಿ : ನಿಮ್ಮ ಇಷ್ಟಾರ್ಥಗಳು ಈಡೇರಲಿದೆ. ನಿಮಗೆ ಹೊಸ ಉದ್ಯೋಗವಕಾಶಗಳು ಹುಡುಕಿ ಬರಬಹುದು. ಹೂಡಿಕೆ ಮಾಡಲು ಬಯಸುವವರಿಗೆ ಇದು ಉತ್ತಮ ಸಮಯ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...