Kannada Duniya

ಸಾಡೇ ಸಾತಿಯ ಸಮಯದಲ್ಲಿ ಈ ಕೆಲಸ ಮಾಡಿದರೆ ಶನಿ ಕೆಟ್ಟ ಪ್ರಭಾವ ಬೀರುವುದಿಲ್ಲವಂತೆ

ಜಾತಕದಲ್ಲಿ ಶನಿಯ ಸ್ಥಾನದ ಬಗ್ಗೆ ಎಲ್ಲರಿಗೂ ಭಯವಿರುತ್ತದೆ. ಯಾಕೆಂದರೆ ಶನಿಯ ಪ್ರಭಾವ ತುಂಬಾ ಕಠೋರವಾಗಿರುತ್ತದೆ. ಅದರಲ್ಲೂ ಶನಿ ನಮ್ಮ ಪಾಪಕರ್ಮಗಳಿಗೆ ಫಲ ನೀಡುವಾತನಾದ್ದರಿಂದ ಸಾಡೇ ಸಾತಿಯ ವೇಳೆ ನಮ್ಮ ಜೀವನದಲ್ಲಿ ಸಂಕಷ್ಟವನ್ನು ತಂದೊಡ್ಡುತ್ತಾನೆ. ಹಾಗಾಗಿ ಈ ಸಮಯದಲ್ಲಿ ಶನಿಯ ಪ್ರಭಾವವನ್ನು ಕಡಿಮೆ ಮಾಡಲು ಈ ಕೆಲಸ ಮಾಡಿ.

ನೀವು ಬಡವರಿಗೆ, ನಿರ್ಗತಿಕರಿಗೆ ಅವಮಾನ ಮಾಡಬೇಡಿ. ಇದರಿಂದ ಶನಿ ಕೋಪಗೊಳ್ಳುತ್ತಾನಂತೆ, ಹಾಗಾಗಿ ಅಂತಹ ಜನರಿಗೆ ಸಹಾಯ ಹಸ್ತ ನೀಡಿ.

ಹಾಗೇ ಪರಿಸರದ ಬಗ್ಗೆ ವಿಶೇಷ ಕಾಳಜಿವಹಿಸುವವರ ಬಗ್ಗೆ ಶನಿ ವಿಶೇಷ ಪ್ರೀತಿಯನ್ನು ವ್ಯಕ್ತಪಡಿಸುತ್ತಾನಂತೆ. ಹಾಗಾಗಿ ಪ್ರಕೃತಿ, ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಿ.

ಅಲ್ಲದೇ ಬೇರೆಯವರನ್ನು ನಾಶ ಮಾಡಲು, ಅವರನ್ನು ಕೆಟ್ಟ ಮಾರ್ಗದಲ್ಲಿ ನೂಕುವಂತಹ ಕೆಲಸಗಳನ್ನು ಮಾಡಬೇಡಿ. ಅದಕ್ಕಾಗಿ ಹಣವನ್ನು ವ್ಯರ್ಥ ಮಾಡಬೇಡಿ. ಅಂತವರನ್ನು ಶನಿಯು ಕ್ಷಮಿಸುವುದಿಲ್ಲವಂತೆ.

ಹಾಗೇ ನೀವು ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಕೂಡ ಇತರರ ಹಕ್ಕುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಬೇಡಿ. ಇಂತವರನ್ನು ಶನಿಯು ಶಿಕ್ಷಿಸುತ್ತಾನಂತೆ.
ಅಲ್ಲದೇ ನಿಮ್ಮ ಸ್ಥಾನದ ಬಗ್ಗೆ ಹೆಚ್ಚು ಹೆಮ್ಮೆ ಪಡಬೇಡಿ. ಇಂತವರನ್ನು ಬಡವರನ್ನಾಗಿಸುವ ಶಕ್ತಿ ಶನಿಗಿದೆಯಂತೆ.

ಯಾರಾದರೂ ಸಾಯುವಂತಹ ಸಂದರ್ಭದಲ್ಲಿದ್ದರೆ ಅವರು ನಿಮ್ಮ ಶತ್ರುಗಳಾಗಿದ್ದರೂ ಕೂಡ ಅವರಿಗೆ ಸಹಾಯ ಮಾಡಿ. ಇದರಿಂದ ಶನಿ ಸಂತೋಷಗೊಳ್ಳುತ್ತಾನಂತೆ.

ಕುಡಿಯಲು ನೀರು ಕೇಳಿದವರಿಗೆ ನೀರನ್ನು ನೀಡಿ, ಬಡರೋಗಿಗಳಿಗೆ ನಿಮ್ಮ ಕೈಲಾದಷ್ಟು ಔಷಧಿಗಳನ್ನು ದಾನ ಮಾಡಿ. ಅಮಲು ಪದಾರ್ಥಗಳನ್ನು ಸೇವಿಸಬೇಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...