Kannada Duniya

ಹೋಳಿಯ ದಿನದಂದು ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿದರೆ ಗ್ರಹ ದೋಷ ನಿವಾರಣೆಯಾಗುತ್ತದೆಯಂತೆ

ಮಾರ್ಚ್ 25ರಂದು ಹೋಳಿ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಈ ದಿನ ಬಹಳ ವಿಶೇಷವಾಗಿದೆ. ಹಾಗಾಗಿ ಜಾತಕದಲ್ಲಿ ಗ್ರಹ ದೋಷಗಳಿದ್ದರೆ ಅದನ್ನು ನಿವಾರಿಸಲು ನೀವು ಈ ದಿನ ಸ್ನಾನದ ನೀರಿಗೆ ಈ ವಸ್ತುಗಳನ್ನು ಬೆರೆಸಿ.

ನಿಮ್ಮ ಜಾತಕದಲ್ಲಿ ಸೂರ್ಯ ದೋಷವಿದ್ದರೆ ನೀರಿಗೆ ಏಲಕ್ಕಿ, ಕೇಸರಿ, ಗಸಗಸೆ, ಅಕ್ಕಿ, ಕೆಂಪು ಹೂಗಳನ್ನು ಬೆರೆಸಿ ಸ್ನಾನ ಮಾಡಿ.

ನಿಮ್ಮ ಜಾತಕದಲ್ಲಿ ಚಂದ್ರನು ಕೆಟ್ಟ ಸ್ಥಾನದಲ್ಲಿದ್ದರೆ ಬಿಳಿ ಚಂದನ, ಹಾಲನ್ನು ನೀರಿಗೆ ಬೆರೆಸಿ ಸ್ನಾನ ಮಾಡಿ.

ನಿಮ್ಮ ಜಾತಕದಲ್ಲಿ ಮಂಗಳನ ಸ್ಥಾನವನ್ನು ಬಲಪಡಿಸಲು ನೀರಿಗೆ ಕೆಂಪು ಹೂ, ಕೆಂಪು ಚಂದನ, ಇಂಗು ಬೆರೆಸಿ ಸ್ನಾನ ಮಾಡಿ.

ನಿಮ್ಮ ಜಾತಕದಲ್ಲಿ ಬುಧ ದೋಷವನ್ನು ನಿವಾರಿಸಲು ವೀಳ್ಯದೆಲೆ, ಅಕ್ಕಿ, ನೆಲ್ಲಿಕಾಯಿ ಬೆರೆಸಿದ ನೀರಿನಿಂದ ಸ್ನಾನ ಮಾಡಿ.

ಜಾತಕದಲ್ಲಿ ಗುರುವು ಕೆಟ್ಟ ಸ್ಥಾನದಲ್ಲಿದ್ದರೆ ಹಲದಿ, ಸಾಸಿವೆ, ಜೇನುತುಪ್ಪ, ಮಲ್ಲಿಗೆ ಹೂ ಬೆರೆಸಿದ ನೀರಿನಿಮದ ಸ್ನಾನ ಮಾಡಿ.

ನಿಮ್ಮ ಜಾತಕದಲ್ಲಿ ಶುಕ್ರಮ ಸ್ಥಾನವನ್ನು ಬಲಪಡಿಸಲು ಮೂಲಂಗಿ ಬೀಜ, ಏಲಕ್ಕಿ, ಸಕ್ಕರೆ, ಜಾಯಿ ಕಾಯಿ, ಶ್ರೀಗಂಧವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ.

ಹಾಗೇ ಜಾತಕದಲ್ಲಿ ಶನಿದೋಷವನ್ನು ನಿವಾರಿಸಲು ಕಪ್ಪು ಎಳ್ಳು, ಶಾಮಿ ಎಲೆ, ಬೆರೆಸಿದ ನೀರಿನಿಂದ ಸ್ನಾನ ಮಾಡಿ.

ರಾಹು ಕೆಟ್ಟ ಸ್ಥಾನದಲ್ಲಿದ್ದರೆ ಸುಗಂಧ ದ್ರವ್ಯ, ಎಳ್ಳು ಹಾಗೂ ಕೇತು ಕೆಟ್ಟ ಸ್ಥಾನದಲ್ಲಿದ್ದರೆ ಕೆಂಪು ಚಂದನ ಬೆರೆಸಿದ ನೀರಿನಿಂದ ಸ್ನಾನ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...