Kannada Duniya

Handwriting: ಕೈ ಬರಹದ ಮೂಲಕ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬಹುದು

ಶಾಲೆಯಲ್ಲಿ ಶಿಕ್ಷಕರು ಎಷ್ಟೇ ಚೆನ್ನಾಗಿ ಬರೆಯಿರಿ ಎಂದು ಹೇಳಿದರೂ ಕೂಡ ಕೆಲವರ ಬರಹ ಚೆನ್ನಾಗಿರುವುದಿಲ್ಲ. ಇದರ ಹಿಂದೆ ಒಂದು ವಿಶೇಷ ಕಾರಣವಿದೆ. ಅದೇನೆಂದರೆ ಕೈಬರಹ ವ್ಯಕ್ತಿಯ ವ್ಯಕ್ತಿತ್ವಕ್ಕೆ ಸಂಬಂಧಿಸಿದೆ. ಹಾಗಾಗಿ ಅವರ ಕೈಬರಹದ ಮೂಲಕ ಅವರ ವ್ಯಕ್ತಿತ್ವ ತಿಳಿಯಬಹುದಂತೆ.

 

ನಾವು ಬರೆಯುವ ಪ್ರತಿ ಅಕ್ಷರವನ್ನು 3 ಭಾಗಗಳಾಗಿ ಮಾಡಲಾಗುತ್ತದೆ. ಅದರಲ್ಲಿ ಮೇಲಿನ ಭಾಗ (ವ್ಯಕ್ತಿಯ ಜೀವನದ ತತ್ವ ಮತ್ತು ಮೌಲ್ಯವನ್ನು ತಿಳಿಸುತ್ತದೆ), ಮಧ್ಯಮ ಭಾಗ (ವ್ಯಕ್ತಿಯ ನಡವಳಿಕೆಯನ್ನು ಸೂಚಿಸುತ್ತದೆ) ಮತ್ತು ಕೆಳಗಿನ ಭಾಗ (ವ್ಯಕ್ತಿಯ ಆಸೆ ಮತ್ತು ಕಾರ್ಯಗಳನ್ನು ತಿಳಿಸುತ್ತದೆ). ಹಾಗಾಗಿ ವ್ಯಕ್ತಿಯ ನಡವಳಿಕೆಯನ್ನು ತಿಳಿಯಲು ಆತ ಬರೆದ ಅಕ್ಷರದ ಮಧ್ಯಭಾಗವನ್ನು ಗಮನಿಸಿ.

 

ವ್ಯಕ್ತಿ ಬರೆದ ಪತ್ರದಲ್ಲಿ ಮಧ್ಯ ಭಾಗದ ಅಕ್ಷರದ ಗಾತ್ರವು ಎಲ್ಲಾ ಅಕ್ಷರಗಳ ಗಾತ್ರದಂತೆ ಇದ್ದರೆ ಇವರು ಸಂದರ್ಭಗಳಿಗನುಗುಣವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇವರು ತಮ್ಮ ಜೊತೆಗೆ ಇತರರ ಜೀವನವನ್ನು ಸರಳಗೊಳಿಸುತ್ತಾರೆ ಎಂಬುದನ್ನು ಸೂಚಿಸುತ್ತದೆ.

 

Home Vastu: ಅನಾರೋಗ್ಯದ ಸಮಸ್ಯೆ ಕಾಡುತ್ತಿದೆಯೇ? ಮನೆಯಲ್ಲಿ ಈ ಬದಲಾವಣೆ ಮಾಡಿ

 

ಹಾಗೇ ಅವರ ಬರವಣಿಗೆಯ ಮಧ್ಯಭಾಗವು ಇತರ ಭಾಗಗಳ ಅಕ್ಷರಗಳಿಗಿಂತ ದೊಡ್ಡದಾಗಿದ್ದರೆ, ಅವರು ತಮ್ಮ ಆಸೆಗಳನ್ನು ಪೂರೈಸಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಇಂಥವರನ್ನು ಕುರುಡಾಗಿ ನಂಬಬೇಡಿ.

 

ಅವರ ಅಕ್ಷರದ ಮಧ್ಯಭಾಗವು ಇತರ ಭಾಗಕ್ಕಿಂತ ಚಿಕ್ಕದಾಗಿದ್ದರೆ ಇವರು ಹೆಚ್ಚು ಭಯವನ್ನು ಹೊಂದಿರುತ್ತಾರೆ. ಸಣ್ಣ ಸಮಸ್ಯೆಗಳನ್ನು ಎದುರಿಸಲು ಹಿಂಜರಿಯುತ್ತಾರೆ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳದೇ ಬೇರೆಯವರ ಮೇಲೆ ಅವಲಂಬಿತರಾಗುತ್ತಾರೆ ಎಂಬುದನ್ನು ಸೂಚಿಸುತ್ತದೆ.

 

Handwriting of a person tells about his character


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...