Kannada Duniya

Chanyaka niti : ಈ ಅಭ್ಯಾಸಗಳು ಗಂಡ ಹೆಂಡತಿಯ ಸಂಬಂಧವನ್ನು ಹಾಳುಮಾಡುತ್ತದೆಯಂತೆ….!

ಆಚಾರ್ಯ ಚಾಣಕ್ಯರ ಪ್ರಕಾರ, ಪತಿ ಮತ್ತು ಪತ್ನಿಯರ ಸಂಬಂಧ ಶುದ್ಧ ಸಂಬಂಧವಾಗಿದೆ. ಈ ಸಂಬಂಧ ಕೆಟ್ಟುಹೋದರೆ ಅನೇಕ ಜನರ ಮೇಲೆ ಪರಿಣಾಮಬೀರುತ್ತದೆ. ಹಾಗಾಗಿ ಈ ಸಂಬಂಧವನ್ನು ಯಾವಾಗಲೂ ಚೆನ್ನಗಿಟ್ಟುಕೊಳ್ಳಿ. ಇದರಿಂದ ಜೀವನದಲ್ಲಿ ನೆಮ್ಮದಿ ಸಿಗುತ್ತದೆ. ಈ ಅಭ್ಯಾಸಗಳು ಪತಿ-ಪತ್ನಿಯ ಸಂಬಂಧವನ್ನು ಕೆಡಿಸುತ್ತದೆಯಂತೆ.

ಕೋಪ : ಚಾಣಕ್ಯರು ತಿಳಿಸಿದಂತೆ ಕೋಪ ಪತಿ-ಪತ್ನಿಯರ ನಡುವಿನ ಸಂಬಂಧವನ್ನು ಹಾಳು ಮಾಡುತ್ತದೆ. ಕೋಪವು ಒಂದು ದೊಡ್ಡ ನ್ಯೂನತೆಯಾಗಿದೆ. ಕೋಪದಲ್ಲಿ ವ್ಯಕ್ತಿ ಒಳ್ಳೆಯದು ಮತ್ತು ಕೆಟ್ಟದರ ವ್ಯತ್ಯಾಸವನ್ನು ಮರೆತುಬಿಡುತ್ತಾನೆ. ಕೋಪವು ವ್ಯಕ್ತಿಯ ದೊಡ್ಡ ಶತ್ರು.ಹಾಗಾಗಿ ಪತಿ ಪತ್ನಿಯರ ಸಂಬಂಧ ಉತ್ತಮವಾಗಿರಲು ಕೋಪಕ್ಕೆ ಸ್ಥಾನ ನೀಡಬಾರದು.

ಸಂಬಂಧದಲ್ಲಿ ಈ ಸಮಸ್ಯೆಗಳು ಶುರುವಾದಾಗ ಕೌನ್ಸಲಿಂಗ್ ಗೆ ಒಳಪಡುವುದು ಉತ್ತಮ. ಇಲ್ಲವಾದರೆ ಸಂಬಂಧ ಕೆಡುತ್ತದೆ

ಮೋಸ : ಸಂಬಂಧವನ್ನು ಹಾಳುಮಾಡುವಂತಹ ಇನ್ನೊಂದು ಅಸ್ತ್ರವೆಂದರೆ ಅದು ಮೋಸ. ಮೋಸ ಮಾಡುವಂತಹ ಜನರಿಗೆ ಗೌರವ ಸಿಗುವುದಿಲ್ಲ. ಇದು ಗಂಡ ಹೆಂಡತಿಯ ಸಂಬಂಧವನ್ನು ಹಾಳು ಮಾಡುತ್ತದೆ.ಹಾಗಾಗಿ ಇದು ದಾಂಪತ್ಯ ಜೀವನದಲ್ಲಿ ಕಾಣಿಸಿಕೊಳ್ಳಬಾರದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...