Kannada Duniya

chanakya niti : ದುಃಖ ಮತ್ತು ನೋವನ್ನು ದೂರಮಾಡಲು ಚಾಣಕ್ಯರ ಈ ನೀತಿಯನ್ನು ಪಾಲಿಸಿ…!

ಒಬ್ಬ ವ್ಯಕ್ತಿಯು ತನ್ನ ಅಭ್ಯಾಸಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಇಲ್ಲವಾದರೆ ಅದರಿಂದ ಹಲವು ಸಮಸ್ಯೆಗಳು ಕಾಡುತ್ತವೆ. ದುಃಖ, ನೋವು ಉಂಟಾಗಬಹುದು. ಹಾಗಾಗಿ ಚಾಣಕ್ಯರು ತಿಳಿಸಿದ ಈ ನಿಯಮಗಳನ್ನು ಪಾಲಿಸಿದರೆ ದುಃಖ ಮತ್ತು ನೋವನ್ನು ದೂರಮಾಡಬಹುದಂತೆ.

ಟೀಕೆ ಮಾಡಬೇಡಿ : ಚಾಣಕ್ಯರು ತಿಳಿಸಿದಂತೆ ಒಬ್ಬನು ಎಂದಿಗೂ ಇತರರನ್ನು ಟೀಕಿಸಬಾರದು. ಯಾವಾಗ ಜೀವನದಲ್ಲಿ ಟೀಕಿಸುವ ಪ್ರವೃತ್ತಿ ಹೆಚ್ಚಾಗುತ್ತಾ ಹೋಗುತ್ತದೆಯೋ ಆಗ ದುಃಖ ಮತ್ತು ಸಂಕಟ ಪ್ರಾರಂಭವಾಗುತ್ತದೆ. ಹಾಗಾಗಿ ಅದರಿಂದ ದೂರವಿರಿ.

ದುರಾಶೆಯಿಂದ ದೂರವಿರಿ : ಚಾಣಕ್ಯರ ಪ್ರಕಾರ ಕಷ್ಟಪಟ್ಟು ದುಡಿದ ಹಣ ಮಾತ್ರ ವ್ಯಕ್ತಿಯ ಬಳಿ ಇರುತ್ತದೆ. ಉಳಿದದ್ದು ಬಂದಂತೆ ಹೋಗುತ್ತದೆ. ಆದ್ದರಿಂದ ಹಣದ ವಿಚಾರದಲ್ಲಿ ಯಾವುದೇ ರೀತಿಯ ದುರಾಸೆ ಇರಬಾರದು. ಸರಿಯಾದ ದಾರಿಯಲ್ಲಿ ನಡೆಯುವವನಿಗೆ ಮತ್ತು ಕಷ್ಟಪಟ್ಟು ದುಡಿದು ಹಣ ಸಂಪಾದಿಸುವವನಿಗೆ ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆ. ಅವರಿಗೆ ಗೌರವವು ಸಿಗುತ್ತದೆ.

ಡಿಸೆಂಬರ್ ತಿಂಗಳಲ್ಲಿ ಏಕಾಂಗಿ ಪ್ರವಾಸಕ್ಕಾಗಿ ಈ ಸುಂದರ ಸ್ಥಳಗಳನ್ನು ಅನ್ವೇಷಿಸಿ….!

ಅಹಂಕಾರ ಬೇಡ : ಅಹಂಕಾರವು ಒಂದು ರೋಗ. ಇದನ್ನು ಒಳಗೊಂಡ ವ್ಯಕ್ತಿ ನಾಶವಾಗುವುದನ್ನು ತಡೆಯಲು ಸಾಧ್ಯವಿಲ್ಲ. ಹಾಗಾಗಿ ಅಹಂಕಾರದಿಂದ ದೂರವಿರಬೇಕು.

ಸೋಮಾರಿತನದಿಂದ ದೂರವಿರಿ : ಸೋಮಾರಿತನ ದುಃಖ ಮತ್ತು ಸಂಕಟಕ್ಕೆ ಕಾರಣವಾಗುತ್ತದೆ. ಸೋಮಾರಿತನ ವ್ಯಕ್ತಿಯನ್ನು ಕೆಲಸ ಮಾಡದಂತೆ ತಡೆಯುತ್ತದೆ. ಅಂತಹ ವ್ಯಕ್ತಿ ಅವಕಾಶವನ್ನು ಬಳಸಿಕೊಳ್ಳುವುದಿಲ್ಲ. ಆದ್ದರಿಂದ ಅದನ್ನು ತ್ಯಜಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...