Kannada Duniya

ಸುಲಭವಾಗಿ ಮಾಡಿ ‘ಪನ್ನೀರ್ ಬುರ್ಜಿ’…..!

ಚಪಾತಿ, ರೋಟಿ ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಬೆಳಿಗ್ಗೆ ತಿಂಡಿಗೆ ರುಚಿಕರವಾದ ಈ ಪನ್ನೀರ್ ಬುರ್ಜಿಯನ್ನು ಮಾಡಿಕೊಂಡು ತಿನ್ನಬಹುದು. ಮಾಡುವುದಕ್ಕೂ ಸುಲಭವಿದೆ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು : 3 ಟೇಬಲ್ ಸ್ಪೂನ್-ತುಪ್ಪ, ½ ಟೀ ಸ್ಪೂನ್-ಜೀರಿಗೆ, ½ ಕಪ್- ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು), 2 ಟೀ ಸ್ಪೂನ್- ಶುಂಠಿ, ಬೆಳ್ಳುಳ್ಳಿ ಪೇಸ್ಟ್, 2 ಹಸಿಮೆಣಸು (ಚಿಕ್ಕದಾಗಿ ಕತ್ತರಿಸಿದ್ದು), 1 ಕಪ್- ಚಿಕ್ಕದಾಗಿ ಕತ್ತರಿಸಿದ ಟೊಮೆಟೊ,1/4 ಟೀ ಸ್ಪೂನ್-ಅರಿಶಿನ, ½ ಟೀ ಸ್ಪೂನ್-ಖಾರದ ಪುಡಿ, ½ ಟೀ ಸ್ಪೂನ್-ಧನಿಯಾ ಪುಡಿ, ¼ ಟೀ ಸ್ಪೂನ್-ಗರಂ ಮಸಾಲ. 250 ಗ್ರಾಂ-ಪನ್ನೀರ್, ಉಪ್ಪು-ರುಚಿಗೆ ತಕ್ಕಷ್ಟು, ಸ್ವಲ್ಪ-ಕೊತ್ತಂಬರಿ ಸೊಪ್ಪು.

Lal Kitab : ಈ ತಂತ್ರಗಳಿಂದ ನಿಮಗೆ ನಿದ್ರೆ ಚೆನ್ನಾಗಿ ಬರುತ್ತದೆ, ಬಡತನ ದೂರವಾಗುತ್ತದೆ…!

ಮಾಡುವ ವಿಧಾನ : ಮೊದಲಿಗೆ ಪನ್ನೀರ್ ಅನ್ನು ಚೆನ್ನಾಗಿ ತುರಿದುಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ನಂತರ ಜೀರಿಗೆ ಹಾಕಿ ಅದು ಸಿಡಿದಾಗ ಈರುಳ್ಳಿ ಹಾಕಿ ಫ್ರೈ ಮಾಡಿ. ಇದು ತುಸು ಬಣ್ಣ ಬದಲಾದಾಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಹಾಕಿ ಫ್ರೈ ಮಾಡಿ. ನಂತರ ಟೊಮೆಟೊ ಹಾಕಿ ಅದು ತುಸು ಮೆತ್ತಗಾಗುವವರೆಗೆ ಫ್ರೈ ಮಾಡಿ.ನಂತರ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲ ಹಾಕಿ 5 ನಿಮಿಷಗಳವರೆಗೆ ಫ್ರೈ ಮಾಡಿ.ಇದಾದ ನಂತರ ಪನ್ನೀರ್ ಹಾಕಿ 2 ನಿಮಿಷಗಳವರೆಗೆ ಚೆನ್ನಾಗಿ ಮಿಕ್ಸ್ ಮಾಡಿ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿ. ಇದನ್ನು ಚಪಾತಿ, ರೋಟಿ, ಬ್ರೆಡ್ ಜತೆ ಸವಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...