Kannada Duniya

ಪ್ರೋಟೀನ್ ತುಂಬಿರುವ ಮೊಟ್ಟೆ ಮತ್ತು ಪನ್ನೀರ್ ನಲ್ಲಿ ಯಾವುದು ಒಳ್ಳೆಯದು?

ಪ್ರೋಟೀನ್ ದೇಹಕ್ಕೆ ಅಗತ್ಯವಾಗಿ ಬೇಕು. ಇದು ದೇಹದ ಸ್ನಾಯುಗಳು ಮತ್ತು ಮೂಳೆಗಳನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ಇದು ಮೊಟ್ಟೆ ಮತ್ತು ಹಾಲಿನ ಉತ್ಪನ್ನಗಳಲ್ಲಿ ಹೆಚ್ಚು ಕಂಡುಬರುತ್ತದೆ. ಹಾಗಾದ್ರೆ ಪ್ರೋಟೀನ್ ಮತ್ತು ಮೊಟ್ಟೆಯಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ ಎಂಬುದನ್ನು ತಿಳಿಯಿರಿ.

40 ಗ್ರಾಂ ಪನ್ನೀರ್ ನಲ್ಲಿ 7 ಗ್ರಾಂ ಪ್ರೋಟೀನ್, 190 ಮಿಲಿಗ್ರಾಂ ಕ್ಯಾಲ್ಸಿಯಂ, 5ಗ್ರಾಂ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು ಇದೆ. ಮೊಟ್ಟೆಯಲ್ಲಿ 6 ಗ್ರಾಂ ಪ್ರೊಟೀನ್ ಇದೆ, 1ಮಿಲಿಗ್ರಾಂ ಕಬ್ಬಿಣ, 25 ಮಿಲಿಗ್ರಾಂ ಕ್ಯಾಲ್ಸಿಯಂ ಇದೆ.

ಮೊಟ್ಟೆ ಮತ್ತು ಪನ್ನೀರ್ ಎರಡು ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆಯ ಸೇವನೆ ಮಾಡದವರು ಪನ್ನೀರ್ ಅನ್ನು ಸೇವಿಸಬಹುದು. ಆದರೆ ಮೊಟ್ಟೆಗಿಂತ ಪನ್ನೀರ್ ದುಬಾರಿಯಾಗಿದೆ ಮತ್ತು ಕಲಬೆರೆಕೆ ಕೂಡ ಹೆಚ್ಚು. ಹಾಗಾಗಿ ಪನ್ನೀರ್ ಸೇವಿಸುವವರು ಕಲಬೆರಕೆಯ ಬಗ್ಗೆ ಎಚ್ಚರಿಕೆ ಇರಲಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...