Kannada Duniya

ನಿಮ್ಮ ಮನೆಯಲ್ಲಿ ಅಗಲವಾದ ಎಲೆಗಳನ್ನು ಹೊಂದಿರುವ ಗಿಡವಿದ್ದರೆ ಏನಾಗುತ್ತದೆ ಗೊತ್ತಾ….?

ಚೀನಾದ ವಾಸ್ತು ಶಾಸ್ತ್ರ ಬಹಳ ಜನಪ್ರಿಯವಾಗಿದೆ. ಇದಕ್ಕೆ ಫೆಂಗ್ ಶೂಯಿ ಎಂದು ಕರೆಯಲಾಗುತ್ತದೆ. ಇದರಲ್ಲಿ ಮನೆಯ ನಿರ್ಮಾಣದಿಂದ ಹಿಡಿದು ಮನೆಯೊಳಗೆ ಇರಿಸುವ ವಸ್ತುಗಳವರೆಗೆ ತಿಳಿಸಲಾಗಿದೆ. ಸಸ್ಯಗಳು ಕೂಡ ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಹಾಗಾಗಿ ಫೆಂಗ್ ಶೂಯಿ ಪ್ರಕಾರ ನಿಮ್ಮ ಮನೆಯಲ್ಲಿ ಅಗಲವಾದ ಎಲೆಗಳನ್ನು ಹೊಂದಿರುವ ಗಿಡವಿದ್ದರೆ ಶುಭವೇ? ಅಶುಭವೇ? ಎಂಬುದನ್ನು ತಿಳಿಯಿರಿ.

ಫೆಂಗ್ ಶೂಯಿ ಪ್ರಕಾರ, ಅಗಲವಾದ ಎಲೆಗಳನ್ನು ಹೊಂದಿರುವ ಸಸ್ಯಗಳು ಮಂಗಳಕರವಾಗಿದೆ. ಅವುಗಳ ದೊಡ್ಡ ಎಲೆಗಳು ಹಾನಿಕಾರಕ ವಿಕಿರಣಗಳನ್ನು ಹೀರಿಕೊಳ್ಳುತ್ತದೆ. ಇದು ವಾತಾವರಣದ ಶುದ್ಧತೆಯನ್ನು ಕಾಪಾಡುತ್ತದೆ. ಅಲ್ಲದೇ ಈ ಎಲೆಗಳು ಮನೆಯಲ್ಲಿ ಸಕರಾತ್ಮಕತೆಯನ್ನು ತರುತ್ತದೆ. ಮನಸ್ಸಿಗೆ ಶಾಂತಿ ನೀಡುತ್ತವೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

ಮಹಿಳೆಯರು ಶನಿ ದೇವನನ್ನು ಪೂಜಿಸಬಹುದೇ? ಅಥವಾ ಬೇಡವೇ?

ಹಾಗಾಗಿ ಈ ಸಸ್ಯಗಳನ್ನು ಸಂಪತ್ತಿನ ಮೂಲೆಯಾಗಿರುವ ಮನೆಯ ಆಗ್ನೇಯ ಮೂಲೆಯಲ್ಲಿ ನೆಡಬೇಕು. ಈ ಸಸ್ಯವು ಮನೆಯಲ್ಲಿ ಸಂತೋಷ, ಶಾಂತಿ, ಯಶಸ್ಸು, ಹಣ ಮತ್ತು ಸಮೃದ್ಧಿಯನ್ನು ತರುತ್ತದೆ. ಒಂದು ವೇಳೆ ಈ ಸಸ್ಯದ ಎಲೆಗಳು ಒಣಗಿದ್ದರೆ ತಕ್ಷಣವೇ ಅದನ್ನು ತೆಗೆದುಹಾಕಿ. ಯಾಕೆಂದರೆ ಇದು ದೊಡ್ಡ ಹಾನಿಯನ್ನುಂಟುಮಾಡುತ್ತದೆ.

 

Effects of having broad leaf plant at home


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...