Kannada Duniya

ಜೀವನದ ಎದುರಾದ ವಿಘ್ನಗಳು ನಿವಾರಣೆಯಾಗಲು ವಿಘ್ನೇಶ ನನ್ನು ಈ ರೀತಿ ಪೂಜಿಸಿ…!

ಗಣಪತಿಯನ್ನು ವಿಘ್ನ ನಿವಾರಕನೆಂದು ಕರೆಯುತ್ತಾರೆ. ಗಣಪತಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಗಣಪತಿಯನ್ನು ಪ್ರತಿನಿತ್ಯ ಪೂಜಿಸಿದರೆ ಒಳ್ಳೆಯದು. ಅದರಲ್ಲೂ ಬುಧವಾರ ಗಣಪತಿಗೆ ಅರ್ಪಿತವಾಗಿರುವುದರಿಂದ ಇಂದು ಗಣಪತಿಯನ್ನು ವಿಶೇಷವಾಗಿ ಪೂಜಿಸಿದರೆ ಶಾಂತಿ ಸಮೃದ್ದಿ, ಏಳಿಗೆ ಲಭಿಸುತ್ತದೆ.

ಬುಧವಾರ ಸ್ನಾನಾಧಿಗಳನ್ನು ಮಾಡಿ ಸ್ವಚ್ಛವಾದ ಬಟ್ಟೆ ತೊಟ್ಟು ಪೂಜೆಯ ಸ್ಥಳವನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ ಕೆಂಪು ಬಟ್ಟೆ ಇಟ್ಟು ಅದರ ಮೇಲೆ ಗಣಪತಿಯ ಫೋಟೊ ಅಥವಾ ವಿಗ್ರಹವನ್ನು ಇಡಿ. ಗಣಪತಿಗೆ ಗರಿಕೆ ಹುಲ್ಲು ಬಹಳ ಪ್ರಿಯವಾದ್ದರಿಂದ 21 ಹುಲ್ಲುಗಳನ್ನು ಗಣಪತಿಗೆ ಅರ್ಪಿಸಿ. ಮೋದಕ ಅಥವಾ ಲಡ್ಡುವನ್ನು ಗಣಪತಿಗೆ ನೈವೇದ್ಯವಾಗಿ ಅರ್ಪಿಸಿ.

ಶ್ರೀಮಂತ ಹೆಂಡತಿ ಬೇಕೆಂದ್ರೆ ಈ ‘ಕೆಲಸ’ ಮಾಡಿ!

ಜೀವನದಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಎದುರಿಸಲು ಗಣಪತಿಗೆ ಪೂಜೆಯ ಸಮಯದಲ್ಲಿ ಕೆಂಪು ಸಿಂಧೂರವನ್ನು ಅರ್ಪಿಸಿ. ಜೀವನದಲ್ಲಿ ಆರ್ಥಿಕ ಸ್ಥಿತಿಯಲ್ಲಿ ಸಮಸ್ಯೆ ಎದುರಾಗಿದ್ದರೆ ಅದನ್ನು ನಿವಾರಿಸಲು ಗಣೇಶ ಸ್ತೋತ್ರವನ್ನು ಪಠಿಸಿ. ಹಾಗೇ ಬುಧವಾರದಂದು ಹಸಿರು ಬಟ್ಟೆ ತೊಟ್ಟು ಹಸುವಿಗೆ ಹಸಿರು ಮೇವನ್ನು ನೀಡಿ, ಬಡವರಿಗೆ ದಾನ ಮಾಡಿದರೆ ಬುಧನು ಪ್ರಸನ್ನನಾಗಿ ಜೀವನದಲ್ಲಿ ಸ್ನಾನ ಮಾನ, ಹಣ, ಗೌರವ ದೊರೆಯುವಂತೆ ಅನುಗ್ರಹಿಸುತ್ತಾನಂತೆ.

To remove all your obstacles, worship Lord Ganesha  this way at home.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...