Kannada Duniya

ಸಂತೋಷ ಮನೆಯಲ್ಲಿ ನೆಲೆಸಿರಲು ಮನೆಯ ಕಿಟಕಿಯ ವಾಸ್ತು ಹೀಗಿರಲಿ…!

ವಾಸ್ತು ಪ್ರಕಾರ ಮನೆಯ ಅಲಂಕಾರಕ್ಕೆ ಬಹಳ ವಿಶೇಷ ಗಮನ ನೀಡಲಾಗುತ್ತದೆ. ಯಾವುದೇ ಮನೆಯಲ್ಲಿ ಸಕರಾತ್ಮಕ ಶಕ್ತಿ ಮತ್ತು ಸಮೃದ್ಧಿ ನೆಲೆಸಿರಲು ವಾಸ್ತು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸುತ್ತಾರೆ. ಅದರಂತೆ ಕಿಟಕಿಗಳನ್ನು ಸರಿಯಾದ ದಿಕ್ಕಿನಲ್ಲಿ ವಾಸ್ತು ಪ್ರಕಾರ ನಿರ್ಮಿಸಿ.

-ಪಶ್ಚಿಮ, ಪೂರ್ವ ಮತ್ತು ಉತ್ತರದ ಗೋಡೆಗಳ ಮೇಲೆ ಕಿಟಕಿಗಳನ್ನು ಹೊಂದಿರುವುದು ಶುಭವೆಂದು ಪರಿಗಣಿಸಲಾಗಿದೆ. ಮನೆಯ ಕಿಟಕಿಗಳು ಯಾವಾಗಲೂ ದ್ವಿಮುಖವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಮನೆಯ ಕಿಟಕಿ ಉತ್ತರ ದಿಕ್ಕಿನಲ್ಲಿದ್ದರೆ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ನೆಲೆಸಿರುತ್ತದೆಯಂತೆ. ಮನೆಯ ಕಿಟಕಿಗಳನ್ನು ತೆರೆದು ಮುಚ್ಚುವಾಗ ಯಾವುದೇ ಶಬ್ದ ಇರಬಾರದು.

ನಿಮ್ಮ ಮನೆಯ ಬ್ರಹ್ಮ ಸ್ಥಳದ ವಾಸ್ತುದೋಷವನ್ನು ನಿವಾರಿಸಲು ಈ ಕ್ರಮ ಪಾಲಿಸಿ

ಹಾಗೇ ಮನೆಯ ಕಿಟಕಿಗಳ ಸಂಖ್ಯೆ ಬೆಸಸಂಖ್ಯೆಯಲ್ಲಿರಬೇಕು. ಕಿಟಕಿಯ ಬಾಗಿಲು ಒಳಮುಖವಾಗಿ ತೆರೆಯುವಂತಿರಬೇಕು. ವಾಸ್ತು ಪ್ರಕಾರ ಹೊರಗೆ ಕಿಟಕಿಗಳ ಬಾಗಿಲು ತೆರೆಯುವುದು ಸೂಕ್ತವೆಂದು ಪರಿಗಣಿಸಲಾಗುವುದಿಲ್ಲ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...