Kannada Duniya

ಶನಿದೇವರ ಪೂಜೆ ಮಾಡುವಾಗ ಈ ನಿಯಮಗಳನ್ನು ಅನುಸರಿಸಿ

ಶನಿದೇವನನ್ನು ನ್ಯಾಯದ ದೇವರೆಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ಯಾರೇ ಯಾವುದೇ ಪಾಪ ಮಾಡಿದರೂ ಅದಕ್ಕೆ ಫಲ ಶನಿ ನೀಡುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಜನರು ಶನಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದರಲ್ಲೂ ಶನಿವಾರಂದು ಶನಿಯನ್ನು ಪೂಜಿಸಲಾಗುತ್ತದೆ. ಹಾಗಾಗಿ ಶನಿಯ ಪೂಜೆ ಮಾಡುವಾಗ ಈ ನಿಯಮ ಪಾಲಿಸಿ.

ಶನಿದೇವರ ಪೂಜೆ ಮಾಡುವ ಮೊದಲು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ. ಹಾಗೇ ಶನಿದೇವರನ್ನು ಆರಾಧಿಸುವ ಸಮಯದಲ್ಲಿ ವಿಶೇಷವಾದ ಶನಿ ಮಂತ್ರಗಳನ್ನು ಪಠಿಸಿ. ಇದರಿಂದ ಶನಿದೇವನ ಅನುಗ್ರಹ ದೊರೆಯುತ್ತದೆಯಂತೆ.

ಅಲ್ಲದೇ ಶನಿದೇವರಿಗೆ ಆರತಿ ಮಾಡುವಾಗ ಎಣ್ಣೆ ದೀಪ ಮತ್ತು ದೂಪವನ್ನು ಬೆಳಗಿ. ಶನಿದೇವರಿಗೆ ನೀಲಿ ಹೂಗಳನ್ನು ಅರ್ಪಿಸಿ. ಆದರೆ ಕೆಂಪು ಹೂಗಳನ್ನು ಶನಿಗೆ ಅರ್ಪಿಸಬೇಡಿ. ಅದರ ಜೊತೆಗೆ ಹಣ್ಣುಗಳು ಮತ್ತು ಸಿಹಿತಿಂಡಿಗಳ್ನು ಅರ್ಪಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...