Kannada Duniya

ಲಕ್ಷ್ಮಿದೇವಿ ಮನೆಗೆ ಪ್ರವೇಶಿಸುವುದಿಲ್ಲ ಮನೆಯಲ್ಲಿ ಪಾತ್ರೆಗಳು ಹೀಗಿದ್ದರೆ….!

ವಾಸ್ತು ಶಾಸ್ತ್ರದಲ್ಲಿ ಎಲ್ಲಾ ದಿಕ್ಕುಗಳ ಮಹತ್ವವನ್ನು ತಿಳಿಸಲಾಗಿದೆ. ಅದರ ಜೊತೆಗೆ ಎಲ್ಲಾ ವಿಷಯಗಳನ್ನು ಸಹ ಉಲ್ಲೇಖಿಸಲಾಗಿದೆ. ಇದು ವ್ಯಕ್ತಿಯ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಆದರೆ ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಮಾಡುವ ಕೆಲವು ತಪ್ಪುಗಳಿಂದ ಮನೆಯಲ್ಲಿ ವಾಸ್ತು ದೋಷ ಕಾಡುತ್ತದೆ. ಇದರಿಂದ ಲಕ್ಷ್ಮಿ ದೇವಿ ಮನೆಗೆ ಪ್ರವೇಶಿಸುವುದಿಲ್ಲ ಎನ್ನಲಾಗುತ್ತದೆ. ಹಾಗಾದ್ರೆ ಅದು ಏನೆಂಬುದನ್ನು ತಿಳಿದುಕೊಳ್ಳಿ.

ಲಕ್ಷ್ಮಿ ದೇವಿ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಕೊಡುತ್ತಾಳೆ. ರಾತ್ರಿ ಕೊಳಕು ಪಾತ್ರೆಗಳನ್ನು ಹಾಗೇ ಇಟ್ಟು ಮಲಗಿದರೆ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ. ಹಾಗಾಗಿ ಅದನ್ನು ರಾತ್ರಿಯೇ ತೊಳೆದಿಟ್ಟು ಮಲಗಿ. ಇದರಿಂದ ಲಕ್ಷ್ಮಿಯ ಆಶೀರ್ವಾದ ದೊರೆಯುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆ ಪವಿತ್ರವಾದ ಸ್ಥಳ ಇಲ್ಲಿ ದೇವತೆಗಳು ನೆಲೆಸಿರುತ್ತಾರೆ. ಹಾಗಾಗಿ ಖಾಲಿ ಅಥವಾ ಕೊಳಕು ಪಾತ್ರೆಗಳನ್ನು ಒಲೆಯ ಮೇಲೆ ಇಡಬಾರದು. ಇದರಿಂದ ಮನೆಯಲ್ಲಿ ಬಡತನ ಆವರಿಸುತ್ತದೆ. ಅಂತವರ ಮನೆಗೆ ಎಂದಿಗೂ ಲಕ್ಷ್ಮಿಯ ಆಶೀರ್ವಾದ ಸಿಗುವುದಿಲ್ಲ.

ತುಲಾ ರಾಶಿಯಲ್ಲಿ ಮಂಗಳ ಮತ್ತು ಕೇತುವಿನ ಸಂಯೋಜನೆ; ಈ ರಾಶಿಯವರ ಪ್ರತಿಷ್ಠೆ ಹೆಚ್ಚಾಗಲಿದೆಯಂತೆ….!

ಹಾಗೇ ಕಸದ ಬುಟ್ಟಿಯನ್ನು ಯಾವತ್ತೂ ಉತ್ತರ ದಿಕ್ಕಿನಲ್ಲಿ ಇಡಬಾರದು. ಏಕೆಂದರೆ ಉತ್ತರ ದಿಕ್ಕನಲ್ಲಿ ಲಕ್ಷ್ಮಿ ದೇವಿ ಮತ್ತು ಕುಬೇರ ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಇದು ಸಂತೋಷ ಮತ್ತು ಸಮೃದ್ಧಿಯ ದಿಕ್ಕು. ಈ ದಿಕ್ಕಿನಲ್ಲಿ ಧನಾತ್ಮಕ ಶಕ್ತಿ ನೆಲೆಸಿರುತ್ತದೆ. ಆದ್ದರಿಂದ ಉತ್ತರ ದಿಕ್ಕನ್ನು ಯಾವಾಗಲೂ ಸ್ವಚ್ಛವಾಗಿಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...