Kannada Duniya

ಲಕ್ಷ್ಮಿದೇವಿಗೆ ಈ ಫಲಪುಷ್ಪಗಳನ್ನು ಅರ್ಪಿಸಿ ಲಕ್ಷ್ಮಿಯ ಅನುಗ್ರಹ ಪಡೆಯಿರಿ ಮಹಾಲಕ್ಷ್ಮಿ ವ್ರತದ ದಿನ….!

ಆಗಸ್ಟ್ 25 ರಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಅಂದು ಲಕ್ಷ್ಮಿದೇವಿಯನ್ನು ಭಕ್ತಿಯಿಂದ ಪೂಜಿಸುವವರಿಗೆ ಲಕ್ಷ್ಮಿದೇವಿಯ ಅನುಗ್ರಹ ದೊರೆತು ಸಕಲ ಸಂಪತ್ತು ಪ್ರಾಪ್ತಿಯಾಗುತ್ತದೆಯಂತೆ. ಹಾಗಾಗಿ ಸುಮಂಗಲಿಯರು ಈ ದಿನ ಲಕ್ಷ್ಮಿದೇವಿಗೆ ಫಲಪುಷ್ಟಗಳನ್ನು ಅರ್ಪಿಸಿ, ಧೂಪ ದೀಪಗಳನ್ನು ಬೆಳಗಿಸಿ ಪೂಜೆ ಮಾಡುತ್ತಾರೆ. ಹಾಗಾಗಿ ಈ ದಿನ ಲಕ್ಷ್ಮಿಗೆ ಯಾವ ಫಲ ಪುಷ್ಪಗಳನ್ನು ಅರ್ಪಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ಇಂದು ಲಕ್ಷ್ಮಿದೇವಿಯ ಸ್ವರೂಪವಾದ ಕಳಶವನ್ನಿಟ್ಟು ಪೂಜೆ ಮಾಡುತ್ತಾರೆ. ಆ ವೇಳೆ ಕಳಶಕ್ಕೆ ಹೂ ಹಣ್ಣುಗಳಿಂದ ಶೃಂಗಾರ ಮಾಡುತ್ತಾರೆ. ದೇವಿ ಸ್ವರೂಪವಾದ ಕಳಶಕ್ಕೆ ಕೆಂಪು, ಹಳದಿ ಮತ್ತು ಬಿಳಿ ಬಣ್ಣದ ಹೂಗಳನ್ನು ಅರ್ಪಿಸಿ. ಹಾಗೇ ಲಕ್ಷ್ಮಿಗೆ ಪ್ರಿಯವಾದ ದಾಸವಾಳ ಹೂ ಮತ್ತು ಕಮಲದ ಹೂವನ್ನು ಅರ್ಪಿಸಿದರೆ ತುಂಬಾ ಒಳ್ಳೆಯದು.

‘ವರಮಹಾಲಕ್ಷ್ಮಿ’ ಹಬ್ಬದಂದು ಈ 4 ವಸ್ತುಗಳಲ್ಲಿ ಒಂದನ್ನು ಮನೆಗೆ ತಂದರೆ ನೀವು ಬಹಳ ಅದೃಷ್ಟಶಾಲಿ !

ಹಾಗೇ ಲಕ್ಷ್ಮಿಗೆ ಪ್ರಿಯವಾದ ದಾಳಿಂಬೆ ಹಣ್ಣನ್ನು ಅರ್ಪಿಸಿ. ಹಾಗೇ ಹಳದಿ ಕೆಂಪು ಬಣ್ಣದ ಹಣ್ಣುಗಳನ್ನು ಅರ್ಪಿಸಿದರೆ ಲಕ್ಷ್ಮಿ ಸಂತೋಷಗೊಂಡು ನಿಮ್ಮ ಮೇಲೆ ಕೃಪೆ ತೋರುತ್ತಾಳೆ. ಹಾಗೇ ಮನೆಯ ಹೊಸ್ತಿಲಿಗೆ ಬಿಳಿ ಹೂಗಳನ್ನಿಟ್ಟು ಪೂಜೆ ಮಾಡಿದರೆ ಲಕ್ಷ್ಮಿ ಸಂತಸಗೊಂಡು ನಿಮ್ಮ ಮನೆಗೆ ಪ್ರವೇಶಿಸುತ್ತಾಳಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...