Kannada Duniya

ರುದ್ರಾಕ್ಷಿ ಧರಿಸುವ ನಿಯಮಗಳನ್ನು ತಿಳಿದುಕೊಳ್ಳಿ

ರುದ್ರಾಕ್ಷಿ ಎನ್ನುವುದು ಶಿವನಿಗೆ ಪ್ರಿಯವಾದುದು. ಇದು ಶಿವನ ಕಣ್ಣೀರಿನಿಂದ ಜನಿಸಿತ್ತು ಎಂದು ಹೇಳಲಾಗುತ್ತದೆ. ಇದನ್ನು ಧರಿಸುವುದರಿಂದ ನೀವು ಶಿವನ ಅನುಗ್ರಹವನ್ನು ಪಡೆಯುತ್ತೀರಿ. ಆದರೆ ರುದ್ರಾಕ್ಷಿಯನ್ನು ಧರಿಸುವಾಗ ಸರಿಯಾದ ನಿಯಮವನ್ನು ಪಾಲಿಸಬೇಕು.

ರುದ್ರಾಕ್ಷಿಯಿಂದ ಮಾಲೆಯನ್ನು ತಯಾರಿಸಲಾಗುತ್ತದೆ. ಈ ಮಾಲೆಯಲ್ಲಿ 108 ರುದ್ರಾಕ್ಷಿಗಳಿರುತ್ತದೆ. ಅಲ್ಲದೇ ರುದ್ರಾಕ್ಷಿಯಲ್ಲಿ ಹಲವು ವಿಧಗಳಿವೆ. ಅಂದರೆ ಒಟ್ಟು 27 ಮುಖದ ರುದ್ರಾಕ್ಷಿಗಳಿವೆ. ಅವುಗಳನ್ನು ಧರಿಸುವುದರಿಂದ ತ್ರಿಮೂರ್ತಿಗಳ ಅನುಗ್ರಹ ನಿಮಗೆ ದೊರೆಯುತ್ತದೆಯಂತೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ರುದ್ರಾಕ್ಷಿಯನ್ನು ಅಮಾವಾಸ್ಯೆ, ಏಕಾದಶಿ ಮುಂತಾದ ಪಕ್ಷದ ದಿನಗಳಂದು ಧರಿಸಬೇಕು. ಅಲ್ಲದೇ ರುದ್ರಾಕ್ಷಿಯನ್ನು ಧರಿಸುವ ಮುನ್ನ ಅದನ್ನು ಗಂಗಾಜಲದಲ್ಲಿ ತೊಳೆದು ಪೂಜೆ ಮಾಡಿ ಅದಕ್ಕೆ ವಿಭೂತಿ ಹಚ್ಚಿ ನಂತರ ಶಿವನನ್ನು ಧ್ಯಾನಿಸುತ್ತಾ “ ಓಂ ನಮಃ ಶಿವಾಯ “ ಮಂತ್ರವನ್ನು ಜಪಿಸುತ್ತಾ ರುದ್ರಾಕ್ಷಿಯನ್ನು ಧರಿಸಬೇಕು. ಹಾಗೇ ಇದನ್ನು ಧರಿಸದ ನಂತರ ಮದ್ಯ ಮಾಂಸವನ್ನು ಸೇವಿಸಬಾರದಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...