Kannada Duniya

ಮಾರ್ಗಶಿರ ಹುಣ್ಣಿಮೆಯ ದಿನ ಈ ವಸ್ತುಗಳನ್ನು ದಾನ ಮಾಡಿದರೆ ಸಂಪತ್ತು ಹೆಚ್ಚಾಗುತ್ತದೆಯಂತೆ

ಮಾರ್ಗಶಿರ ಮಾಸದ ಕೊನೆಯ ಹುಣ್ಣಿಮೆ ಡಿಸೆಂಬರ್ 26ರಂದು ಬರಲಿದೆ. ಇದು ತುಂಬಾ ವಿಶೇಷವಾದ ದಿನ. ಹಾಗಾಗಿ ಈ ದಿನ ದೇವಾನುದೇವರುಗಳ ಪೂಜೆ ಮಾಡಲಾಗುತ್ತದೆ. ಅದರಂತೆ ನಿಮ್ಮ ಸಂಪತ್ತು ಹೆಚ್ಚಾಗಲು ಈ ಮಾಸದಲ್ಲಿ ಈ ವಸ್ತುವನ್ನು ದಾನ ಮಾಡಿ.

ಮಾರ್ಗಶಿರ ಹುಣ್ಣಿಮೆಯ ದಿನ ದಾನಕ್ಕೆ ವಿಶೇಷ ಮಹತ್ವವಿದೆ. ಈ ದಿನ ಸಂಜೆ ದೀಪಗಳನ್ನು ದಾನ ಮಾಡಿ. ಹಾಗೇ ಈ ದಿನ ಬಡವರಿಗೆ ಆಹಾರವನ್ನು ದಾನ ಮಾಡಿ. ಹುಣ್ಣಿಮೆಯ ದಿನ ಹಸುವನ್ನು ದಾನ ಮಾಡುವುದು ಬಹಳ ಫಲಪ್ರದವಾಗಿದೆ.

ಅಲ್ಲದೇ ಈ ದಿನ ಗೋಧಿಯನ್ನು ದಾನ ಮಾಡುವುದು ತುಂಬಾ ಶುಭಕರವಾಗಿದೆ. ಹಾಗೇ ಮಾರ್ಗಶಿರ ಹುಣ್ಣಿಮೆಯ ದಿನ ಕನ್ಯೆಯರಿಗೆ ಖೀರ್ ಅನ್ನು ತಿನ್ನಿಸಿ. ಅಲ್ಲದೇ ಬಡ ಜನರಿಗೆ ಬಟ್ಟೆ ಮತ್ತು ಕಂಬಳಿಯನ್ನು ದಾನ ಮಾಡಿದರೆ ಒಳ್ಳೆಯದಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...