Kannada Duniya

ಮನೆಯಲ್ಲಿ ಜೋಡಿ ಹಕ್ಕಿಗಳ ಪೋಟೊವನ್ನು ಇಡುವುದರಿಂದ ಏನಾಗುತ್ತದೆ ಗೊತ್ತಾ?

ಪ್ರತಿಯೊಬ್ಬರು ವಾಸ್ತು ನಿಯಮವನ್ನು ಪಾಲಿಸಬೇಕು. ಇದರಿಂದ ನೀವು ಸುಖೀ ಜೀವನವನ್ನು ಅನುಭವಿಸಬಹುದು. ಹಾಗಾಗಿ ನಿಮ್ಮ ಮನೆಯಲ್ಲಿ ವಾಸ್ತು ಪ್ರಕಾರ ಯಾವ ವಸ್ತುಗಳನ್ನು ಇಟ್ಟರೆ ಒಳ್ಳೆಯದು ಎಂಬುದನ್ನು ತಿಳಿಯಿರಿ.

ವಾಸ್ತು ಶಾಸ್ತ್ರದ ಪ್ರಕಾರ ದಂಪತಿಗಳು ತಮ್ಮ ರೂಂನಲ್ಲಿ ಲವ್ ಬಡ್ಸ್ ಗಳ ಫೋಟೊವನ್ನು ಹಾಕಿಕೊಳ್ಳಬೇಕು. ಇದರಿಂದ ಅವರ ನಡುವೆ ಪ್ರೀತಿ ಹೆಚ್ಚಾಗುತ್ತದೆಯಂತೆ. ಹಾಗೇ ಮನೆಯಲ್ಲಿ ಜೋಡಿ ಹಂಸಗಳು, ಗಿಳಿಗಳು, ನವಿಲುಗಳು, ಮುಂತಾದ ಪಕ್ಷಿಗಳ ಫೋಟೊವನ್ನು ಇಟ್ಟರೆ ಮಂಗಳಕರವಂತೆ. ಹಾಗೇ ಈ ಫೋಟೊಗಳನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನ ಗೋಡೆಯ ಮೇಲೆ ಇಟ್ಟರೆ ಒಳ್ಳೆಯದಂತೆ. ಇದರಿಂದ ಗಂಡ ಹೆಂಡತಿಯ ಮಧ್ಯೆ ಮಾಧುರ್ಯ ತುಂಬಿರುತ್ತದೆಯಂತೆ.

ಆದರೆ ಮನೆಯಲ್ಲಿ ಒಂಟಿಯಾಗಿರುವ ಪಕ್ಷಿಯ ಫೋಟೊವನ್ನು ಹಾಕಬಾರದಂತೆ. ಇದರಿಂದ ಮನೆಯಲ್ಲಿ ಅಶಾಂತಿ ನೆಲೆಸುತ್ತದೆಯಂತೆ. ಹಾಗೇ ಪಂಜರದಲ್ಲಿ ಕೂಡಿ ಇಟ್ಟ ಪಕ್ಷಿಗಳ ಫೋಟೊವನ್ನು ಮನೆಯಲ್ಲಿ ಇಡಬಾರದಂತೆ. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಅಮಂಗಳವನ್ನು ಉಂಟುಮಾಡುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...