Kannada Duniya

ಮನೆಯನ್ನು ಈ ರೀತಿ ‘ಅಲಂಕರಿಸಿ’ ಮತ್ತು ಹಣ, ಆಹಾರದ ಕೊರತೆಯನ್ನು ನೀಗಿಸಿ…!

ಪ್ರತಿಯೊಬ್ಬರು ತಮ್ಮ ಮನೆಯನ್ನು ವಿವಿಧ ರೀತಿಯಲ್ಲಿ ಅಲಂಕರಿಸುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಮನೆಯನ್ನು ಅಲಂಕರಿಸುವಾಗ ಕೆಲವು ವಿಷಯಗಳನ್ನು ತಿಳಿಸಲಾಗಿದೆ. ಇದು ಮನೆಯನ್ನು ಸುಂದರವಾಗಿ ಕಾಣುವುದಲ್ಲದೇ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಹಾಗಾಗಿ ಮನೆಯನ್ನು ಅಲಂಕರಿಸುವಾಗ ಈ ನಿಯಮ ಪಾಲಿಸಿ.

-ವಾಸ್ತುಪ್ರಕಾರ ಹಾಲ್ ನಲ್ಲಿ ಸೋಫಾ ಸೆಟ್ ಅನ್ನು ನೈರುತ್ಯ ದಿಕ್ಕಿನಲ್ಲಿ ಹಾಕಿ. ಟಿವಿಯನ್ನು ಪಶ್ಚಿಮ ದಿಕ್ಕಿನಲ್ಲಿ ಇರಿಸಿ. ಗೋಡೆಗಳನ್ನು ತಿಳಿ ಬಣ್ಣದಲ್ಲಿರಿಸಿ. ಹಾಗೇ ಕಪ್ಪು ಬಣ್ಣದ ಸ್ಫಟಿಕವನ್ನು ಈಶಾನ್ಯ ದಿಕ್ಕಿಗೆ ಇಟ್ಟುಕೊಳ್ಳಿ. ಇದರಿಂದ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ.

-ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಲು ಈಶಾನ್ಯ ದಿಕ್ಕಿನಲ್ಲಿ ಹಸಿರು ಹೂವಿನ ಹೂದಾನಿಯನ್ನು ಇರಿಸಿ. ಉದ್ಯೋಗ ಮತ್ತು ವ್ಯಾಪಾರದ ಪ್ರಗತಿಗಾಗಿ ಮನಿ ಪ್ಲಾಂಟ್ ಅನ್ನು ಉತ್ತರ ದಿಕ್ಕಿನಲ್ಲಿಡಿ.

-ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ಕಪ್ಪು ಕುದುರೆಯ ಗಾಳವನ್ನು ಹಾಕುವುದು ಶುಭಕರ. ಇದು ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತದೆ.

ಜೀವನದಲ್ಲಿ ಸಂತೋಷದಿಂದಿರಲು ಚಾಣಕ್ಯರ ಈ ನೀತಿಗಳನ್ನು ಅನುಸರಿಸಿ

-ಹಾಗೇ ಇಡೀ ಮನೆಯಲ್ಲಿ ಕೇವಲ ಒಂದೇ ಒಂದು ಕನ್ನಡಿ ಇರಬೇಕು. ಅದನ್ನು ಪೂರ್ವ ಅಥವಾ ಉತ್ತರದ ಗೋಡೆಗ ಕಡೆಗೆ ಇಡಬೇಕು. ಹಾಗೇ ಮಾಡುವುದರಿಂದ ಆದಾಯ ಸಂಪತ್ತು ಹೆಚ್ಚಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...