Kannada Duniya

ಮನೆಗೆ ಲಕ್ಷ್ಮಿ ಬರುವ ಮುನ್ನ ನಿಮಗೆ ಈ ಸಂಕೇತಗಳು ಸಿಗುತ್ತದೆಯಂತೆ…!

ಹಿಂದೂಧರ್ಮದಲ್ಲಿ ಲಕ್ಷ್ಮಿದೇವಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಯಾಕೆಂದರೆ ಲಕ್ಷ್ಮಿದೇವಿ ಸಂಪತ್ತಿಗೆ ಅಧಿದೇವತೆ. ಈಕೆಯನ್ನು ಭಕ್ತಿಯಿಂದ ಪೂಜಿಸಿದರೆ ಮನೆಯಲ್ಲಿ ಸಂಪತ್ತು, ಸಮೃದ್ಧಿ ನೆಲೆಸಿರುತ್ತದೆಯಂತೆ.

ಹಾಗಾಗಿ ಒಂದು ವೇಳೆ ನಿಮ್ಮ ಮನೆಗೆ ಧನ ಲಕ್ಷ್ಮಿ ಪ್ರವೇಶಿಸುತ್ತಿದ್ದರೆ ಆಗ ನಿಮಗೆ ಈ ಸಂಕೇತಗಳು ಸಿಗುತ್ತದೆಯಂತೆ.
ನಿಮ್ಮ ಮನೆಗೆ ಕಪ್ಪು ಇರುವೆಗಳ ಹಿಂಡು ಬಂದರೆ ಆ ಮನೆಗೆ ಲಕ್ಷ್ಮಿದೇವಿ ಪ್ರವೇಶಿಸುತ್ತಾಳೆ ಎಂಬುದನ್ನು ಸೂಚಿಸುತ್ತದೆಯಂತೆ.

ಮನೆಯಲ್ಲಿ ಹಕ್ಕಿ ಗೂಡು ಕಟ್ಟುತ್ತಿದ್ದರೆ ಆ ಮನೆಗೆ ಲಕ್ಷ್ಮಿದೇವಿ ಆಗಮಿಸುತ್ತಾಳೆ ಎಂದರ್ಥವಂತೆ. ಹಾಗೇ ಮನೆಯಲ್ಲಿ ಮೂರು ಹಲ್ಲಿಗಳು ಒಟ್ಟಿಗೆ ಕಾಣಿಸಿಕೊಂಡರೆ ಆ ಮನೆಗೆ ಲಕ್ಷ್ಮಿ ಪ್ರವೇಶಿಸುತ್ತಾಳಂತೆ.

ನಿಮಗೆ ರಾತ್ರಿ ಕನಸಿನಲ್ಲಿ ಪೊರಕೆ, ಗೂಬೆ, ಆನೆ, ಹಲ್ಲಿ, ಹಾವು, ಗುಲಾಬಿ ಹೂ ಕಾಣಸಿದರೆ ಆಗ ನಿಮ್ಮ ಮನೆಗೆ ಅತಿಶೀಘ್ರದಲ್ಲಿ ಲಕ್ಷ್ಮಿದೇವಿ ಬರುತ್ತಾಳೆ ಎಂಬುದನ್ನು ತಿಳಿಯಿರಿ.

ಬೆಳಗ್ಗೆ ಬೇಗ ಎದ್ದು ಈ ಕೆಲಸ ಮಾಡಿದ್ರೆ ನಿಮಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗಲಿದೆ..!

ಹಾಗೇ ತುಳಸಿ ಗಿಡದ ಬಳಿ ಹಲ್ಲಿ ಕಾಣಿಸಿಕೊಂಡರೆ , ಬೆಳಿಗ್ಗೆ ಏಳುವಾಗ ಶಂಖನಾದ ಕೇಳಿದರೆ, ಬೆಳಿಗ್ಗೆ ಏಳುವಾಗ ಪೊರಕೆ ನಿಮ್ಮ ಕಣ್ಣಿವಗೆ ಕಾಣಿಸಿದರೆ ನಿಮ್ಮ ಮನೆಗೆ ಲಕ್ಷ್ಮಿ ಬರುತ್ತಾಳೆ ಎಂದರ್ಥವಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...