Kannada Duniya

ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವಾಗ ಈ ನಿಯಮ ತಪ್ಪದೇ ಪಾಲಿಸಿ….!

ಶಿವನಿಗೆ ತುಂಬಾ ಪ್ರಿಯವಾದ ವಸ್ತುಗಳಲ್ಲಿ ಬಿಲ್ವಪತ್ರೆ ಕೂಡ ಒಂದು. ಇದು ನಿಯಮಿತವಾಗಿ ಶಿವನಿಗೆ ಅರ್ಪಿಸುತ್ತಾ ಬಂದರೆ ಶಿವನ ಅನುಗ್ರಹ ದೊರೆತು ಜೀವನದಲ್ಲಿ ಏಳಿಗೆ ಕಾಣುತ್ತೀರಿ. ಹಾಗಾಗಿ ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಈ ನಿಯಮಗಳನ್ನು ಪಾಲಿಸಿ.

-ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಮೂರು ಎಲೆಗಳು ಒಟ್ಟಿಗೆ ಜೋಡಿಸಿರುವ ಎಲೆಗಳನ್ನು ಮಾತ್ರ ಅರ್ಪಿಸಬೇಕು. ಇಲ್ಲವಾದರೆ ಶಿವನ ಕೋಪಕ್ಕೆ ಗುರಿಯಾಗುತ್ತೀರಿ.

-ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಅದರ ಎಲೆಗಳನ್ನು ಹರಿದುಹಾಕಬಾರದು. ಮತ್ತು ಅದರಲ್ಲಿ ಯಾವುದೇ ರಂಧ್ರವಿರಬಾರದು. ಸರಿಯಾಗಿರುವುದನ್ನು ಆರಿಸಿ ಶಿವನಿಗೆ ಅರ್ಪಿಸಿ.

-ಬಿಲ್ವಪತ್ರೆಯನ್ನು ಅಶುದ್ಧವೆಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಶಿವನಿಗೆ ಅರ್ಪಿಸಿದ ಎಲೆಗಳನ್ನು ತೊಳೆದು ಮತ್ತೆ ಅರ್ಪಿಸಬಹುದು. ಇದರಿಂದ ಯಾವುದೇ ತೊಂದರೆ ಸಂಭವಿಸುವುದಿಲ್ಲ.

-ಶಿವಲಿಂಗಕ್ಕೆ ಬಿಲ್ವಪತ್ರೆಯಿಂದ ಎಲೆಗಳನ್ನು ಅರ್ಪಿಸುವಾಗ ಬಿಲ್ವ ಎಲೆಗಳ ಮೇಲ್ಮೈ ಸುಗಮವಾಗಿರುವ ಕಡೆಯಿಂದ ಬಿಲ್ವ ಎಲೆಗಳನ್ನು ಅರ್ಪಿಸಬೇಕು.

-ಶಿವಲಿಂಗಕ್ಕೆ ಬಿಲ್ವಪತ್ರೆಗಳನ್ನು ಅರ್ಪಿಸುವಾಗ ಉಂಗುರ ಬೆರಳು , ಮಧ್ಯದ ಬೆರಳು ಮತ್ತು ಹೆಬ್ಬೆರಳನ್ನು ಬಳಸಬೇಕು. ಹಾಗೇ ಬಿಲ್ವಪತ್ರೆಯನ್ನು ನೀರಿನಲ್ಲಿ ಮುಳುಗಿಸಿ ಅರ್ಪಿಸಬೇಕು.

ಮರಣಕ್ಕೂ ಮುನ್ನ ಯಮಧರ್ಮ ನೀಡುವ ಚಿಹ್ನೆಗಳಿವು..!

-ಸೋಮವಾರ ಬಿಲ್ವಪತ್ರೆಯ ಎಲೆಗಳನ್ನು ಕೀಳಬಾರದು. ಅದನ್ನು ಹಿಂದಿನ ದಿನವೇ ತೆಗೆದಿಟ್ಟುಕೊಳ್ಳಬೇಕು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...