Kannada Duniya

ಫೆಬ್ರವರಿಯಲ್ಲಿ ಈ ರಾಶಿಯವರಿಗೆ ಲಕ್ಷ್ಮಿದೇವಿಯ ಅನುಗ್ರಹ ದೊರೆಯಲಿದೆಯಂತೆ

ಫೆಬ್ರವರಿ ತಿಂಗಳಿನಲ್ಲಿ ಅನೇಕ ಗ್ರಹಗಳು ತನ್ನ ರಾಶಿ ಚಕ್ರವನ್ನು ಬದಲಾಯಿಸಲಿದೆ. ಇದರಿಂದ ಅನೇಕ ಯೋಗಗಳು ರಚನೆಯಾಗಲಿದ್ದು, ಇದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಅದರಂತೆ ಫೆಬ್ರವರಿಯಲ್ಲಿ ಈ ರಾಶಿಯವರಿಗೆ ಲಕ್ಷ್ಮಿದೇವಿಯ ಅನುಗ್ರಹ ದೊರೆಯಲಿದೆಯಂತೆ.

ಮೇಷ ರಾಶಿ : ಈ ತಿಂಗಳಿನಲ್ಲಿ ನಿಮ್ಮ ಆದಾಯ ಮೂಲಗಳು ಹೆಚ್ಚಾಗಲಿದೆ. ನಿಮ್ಮ ಆರ್ಥಿಕ ಬಿಕ್ಕಟ್ಟು ದೂರವಾಗಲಿದೆ. ನಿಮ್ಮ ಖರ್ಚು ಹೆಚ್ಚಾದರೂ ಅದನ್ನು ನಿವಾರಿಸಲು ಸಾಧ್ಯವಾಗುತ್ತದೆ. ಈ ತಿಂಗಳಿನಲ್ಲಿ ನೀವು ದೊಡ್ಡ ಆಸ್ತಿಯನ್ನು ಖರೀದಿಸಬಹುದು.

ಮಿಥುನ ರಾಶಿ : ನಿಮ್ಮ ಆದಾಯವು ಹೆಚ್ಚಾಗಲಿದೆ. ನೀವು ಕಠಿಣ ಪರಿಶ್ರಮದ ಮೇಲೆ ಉತ್ತಮ ಲಾಭವನ್ನು ಗಳಿಸುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನೀವು ವ್ಯವಹಾರದಲ್ಲಿ ಪ್ರಗತಿ ಸಾಧಿಸುತ್ತೀರಿ.

ವೃಶ್ಚಿಕ ರಾಶಿ : ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಅನುಕೂಲಕರವಾಗಿರುತ್ತದೆ. ಈ ತಿಂಗಳಿನಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಉದ್ಯೋಗಿಗಳು ಉತ್ತಮ ಲಾಭವನ್ನು ಪಡೆಯುತ್ತಾರೆ.

ಧನು ರಾಶಿ : ಶನಿಯಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಈ ಸಮಯದಲ್ಲಿ ನಿಮಗೆ ಹಣ ಸಂಪಾದಿಸಲು ಉತ್ತಮ ಅವಕಾಶ ಕೂಡಿಬರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಬಲಪಡುತ್ತದೆ. ನಿಮ್ಮ ಆದಾಯವು ಹೆಚ್ಚಾಗಲಿದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...