Kannada Duniya

ಫೆಂಗ್ ಶೂಯಿ ವಾಸ್ತು ಶಾಸ್ತ್ರದ ಪ್ರಕಾರ ಒಂಟೆಯ ಪ್ರತಿಮೆಯನ್ನು ಮನೆಯಲ್ಲಿಟ್ಟರೆ ಏನಾಗುತ್ತದೆ ಗೊತ್ತಾ…?

ಫೆಂಗ್ ಶೂಯಿ ಶಾಸ್ತ್ರದ ಮೂಲಕ ಮನೆಯಲ್ಲಿರುವ ವಸ್ತುಗಳನ್ನು ಜೋಡಿಸಿದರೆ ನಾವು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇದನ್ನು ವ್ಯವಹಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಹೊಂದಲು ಬಳಸಬಹುದು. ಇದರಿಂದ ಆರ್ಥಿಕ ಲಾಭವಾಗುತ್ತದೆ. ಹಾಗಾಗಿ ಫೆಂಗ್ ಶೂಯಿ ವಾಸ್ತು ಶಾಸ್ತ್ರದ ಪ್ರಕಾರ ಒಂಟೆಯ ಪ್ರತಿಮೆಯನ್ನು ಮನೆಯಲ್ಲಿಟ್ಟರೆ ಶುಭವೇ? ಅಶುಭವೇ? ಎಂಬುದನ್ನು ತಿಳಿದುಕೊಳ್ಳಿ.

– ಫೆಂಗ್ ಶೂಯಿ ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಕಚೇರಿಯಲ್ಲಿ ಸಮಸ್ಯೆ ಎದುರಾದರೆ ಅಲ್ಲಿ ಒಂಟೆಯ ವಿಗ್ರಹವನ್ನು ಇಡಿ. ಇದರಿಂದ ಸಮಸ್ಯೆ ನಿವಾರಣೆಯಾಗುತ್ತದೆ. ಕೆಲಸಗಾರರು ಶಾಂತಚಿತ್ತದಿಂದ ಕೆಲಸ ಮಾಡುತ್ತಾರೆ. ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ.

-ಮನೆಯ ಲಿವಿಂಗ್ ರೂಂನಲ್ಲಿ ವಾಯುವ್ಯ ಮೂಲೆಯಲ್ಲಿ ಜೋಡಿ ಒಂಟೆಗಳ ಪ್ರತಿಮೆಯನ್ನು ಇಟ್ಟರೆ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಮನೆಯಲ್ಲಿ ಸಕರಾತ್ಮಕತೆ ಹೆಚ್ಚಾಗುತ್ತದೆ. ನಿಮ್ಮಲ್ಲಿ ಆರ್ಥಿಕ ಪ್ರಗತಿಯಾಗುತ್ತದೆ.

ನಿಮ್ಮ ಜೀವನದಲ್ಲಿ ಉತ್ತಮ ಸಂಗಾತಿಯನ್ನು ಪಡೆಯಲು ಹೂವಿನಿಂದ ಈ ಪರಿಹಾರ ಮಾಡಿ…!

-ವೃತ್ತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಫೆಂಗ್ ಶೂಯಿ ಒಂಟೆ ಪ್ರತಿಮೆ ಅಥವಾ ಫೋಟೊವನ್ನು ನಿಮ್ಮ ಅಧ್ಯಯನದ ಕೊಠಡಿಯಲ್ಲಿ ಇಡಿ. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಇದರಿಂದ ವೃತ್ತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...