Kannada Duniya

ಪ್ರೀತಿಗಾಗಿ ಏನು ಬೇಕಾದರೂ ಮಾಡುತ್ತಾರಂತೆ ಈ ‘ರಾಶಿಯವರು’…!

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ಮತ್ತು ನಕ್ಷತ್ರಪುಂಜಗಳು ಪ್ರೀತಿಯ ಜೀವನದ ಮೇಲೆ ಹೆಚ್ಚು ಪ್ರಭಾವಬೀರುತ್ತವೆ. ಪ್ರೀತಿ ಯಶಸ್ಸು ಗಳಿಸಲು ಅಥವಾ ವಿಫಲವಾಗಲು ಗ್ರಹಗಳೇ ಕಾರಣವಾಗಿರುತ್ತವೆ. ಆದರೆ ಈ ರಾಶಿಯಲ್ಲಿ ಜನಿಸಿದವರು ಪ್ರೀತಿಯ ವಿಚಾರದಲ್ಲಿ ತುಂಬಾ ಗಂಭೀರವಾಗಿರುತ್ತಾರಂತೆ. ಇವರು ಪ್ರೀತಿಗಾಗಿ ಏನು ಬೇಕಾದರೂ ಮಾಡುತ್ತಾರಂತೆ. ಹಾಗಾದ್ರೆ ಆ ರಾಶಿಗಳು ಯಾವುದೆಂಬುದನ್ನು ತಿಳಿಯಿರಿ.

ಮಿಥುನ ರಾಶಿ : ಇವರು ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇವರು ತಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಅದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ. ಇವರು ಪ್ರೀತಿಯ ಬಗ್ಗೆ ಹೆಚ್ಚು ನಂಬಿಕೆ ಹೊಂದಿದ್ದಾರೆ ಮತ್ತು ಅದನ್ನು ಉಳಿಸಿಕೊಳ್ಳಲು ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲು ಸಿದ್ದರಿದ್ದಾರೆ.

ಕಟಕ ರಾಶಿ : ಇವರು ತಮ್ಮ ಸಂಗಾತಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಡುತ್ತಾರೆ. ಇವರು ಸಂಗಾತಿಯ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತಾರೆ. ಇವರು ತಮ್ಮ ಹೃದಯದಲ್ಲಿ ಯಾರಿಗಾದರೂ ಸ್ಥಾನವನ್ನು ನೀಡಿದರೆ ಅವರಿಗಾಗಿ ತಮ್ಮ ಜೀವವನ್ನೇ ಕೊಡುತ್ತಾರೆ. ಅವರನ್ನು ಉಳಿಸಿಕೊಳ್ಳುತ್ತಾರೆ.

ಕನ್ಯಾರಾಶಿ : ಇವರು ಪ್ರೀತಿಯ ಬಗ್ಗೆ ಅತ್ಯಂತ ಪ್ರಾಮಾಣಿಕತೆಯನ್ನು ತೋರಿಸುತ್ತಾರೆ. ಇವರು ತಾವು ಇಷ್ಟಪಟ್ಟವರನ್ನು ಬೇರೆಯವರಿಗೆ ಬಿಟ್ಟು ಕೊಡಲು ಬಯಸುವುದಿಲ್ಲ. ಇವರು ಸಂಗಾತಿಯನ್ನು ಸ್ನೇಹಿತರಂತೆ ಭಾವಿಸುತ್ತಾರಂತೆ. ತಾವು ಪ್ರೀತಿಸಿದವರು ಮುಂದೆ ಬರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ.

ಮಹಾಶಿವರಾತ್ರಿಯ ದಿನ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ….!

ಕುಂಭ ರಾಶಿ : ಈ ಜನರು ತುಂಬಾ ಭಾವನಾತ್ಮಕರಾಗಿದ್ದಾರೆ. ಮತ್ತು ತಮ್ಮದೇ ಆದ ರೀತಿಯಲ್ಲಿ ಜೀವನವನ್ನು ನಡೆಸುತ್ತಾರೆ. ಇವರು ತಮ್ಮ ಸಂಗಾತಿಯ ಸಂತೋಷಕ್ಕಾಗಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಿದ್ದಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...