Kannada Duniya

ಪೂಜೆ ಮಾಡುವಾಗ ಸಹೋದರಿಯ ಮಗಳು ಬಂದರೆ ಏನಾಗುತ್ತದೆ ಗೊತ್ತಾ?

ಹಿಂದೂಧರ್ಮದಲ್ಲಿ ಪೂಜೆಗೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ಪ್ರತಿದಿನ ಎಲ್ಲರೂ ಮನೆಯಲ್ಲಿ ಪೂಜೆಯನ್ನು ಮಾಡುತ್ತಾರೆ. ಇದರಿಂದ ಮನೆಯಲ್ಲಿ ನಕರಾತ್ಮಕ ಶಕ್ತಿ ದೂರವಾಗಿ ಸಕರಾತ್ಮಕ ಶಕ್ತಿ ನೆಲೆಸುತ್ತದೆ. ಆದರೆ ಪೂಜೆ ಮಾಡುವಾಗ ಸಹೋದರಿಯ ಮಗಳು ಮನೆಗೆ ಬಂದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ.

ನೀವು ಪೂಜೆ ಮಾಡುವಾಗ ಸಹೋದರಿ ಅಥವಾ ಅವರ ಮಗಳು ಇದ್ದಕ್ಕಿದ್ದಂತೆ ಮನೆಗೆ ಬಂದರೆ ನಿಮ್ಮ ಪೂಜೆ ಯಶಸ್ವಿಯಾಗುತ್ತದೆಯಂತೆ, ನಿಮಗೆ ಎಲ್ಲಾ ದೇವರುಗಳ ಆಶೀರ್ವಾದ ದೊರಕಿದೆ ಎಂಬುದನ್ನು ಇದು ಸೂಚಿಸುತ್ತದೆಯಂತೆ.

ಹಾಗೇ ಪೂಜೆ ಮಾಡುವಾಗ ಗೋಮಾತೆ ಮನೆಯ ಬಾಗಿಲಿಗೆ ಬಂದರೆ ನಿಮ್ಮ ಪೂಜೆ ದೇವರಿಗೆ ಇಷ್ಟವಾಗಿದೆ ಎಂಬುದನ್ನು ಸೂಚಿಸುತ್ತದೆಯಂತೆ. ಈ ವೇಳೆ ಹಸುವಿನ ಪಾದಗಳನ್ನು ಸ್ಪರ್ಶಿಸಿ ಅದಕ್ಕೆ ತಿನ್ನಲು ಆಹಾರವನ್ನು ನೀಡಿದರೆ ಒಳ್ಳೆಯದಂತೆ.

ನೀವು ಪೂಜೆ ಮಾಡುವಾಗ ಸಂತರು, ಭಿಕ್ಷುಕರು ಮನೆ ಬಾಗಿಲಿಗೆ ಬಂದು ಭಿಕ್ಷೆ ಬೇಡಿದರೆ ನಿಮ್ಮ ಪೂಜೆ ಯಶಸ್ವಿಯಾಗಿದೆ ಎಂಬುದನ್ನು ತಿಳಿಸುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...