Kannada Duniya

ಪಿತೃಪಕ್ಷದಲ್ಲಿ ಈ ಕನಸುಗಳನ್ನು ನೋಡುವುದು ಶುಭವಂತೆ…!

ಪಿತೃಪಕ್ಷದಂದು ಪೂರ್ಜಜರ ಆತ್ಮಕ್ಕೆ ಶಾಂತಿ ಸಿಗಲೆಂದು ತರ್ಪಣಗಳನ್ನು ಬಿಡುತ್ತಾರೆ. ಇದರಿಂದ ಪೂರ್ವಜರು ಸಂತೋಷಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಆದರೆ ಪಿತೃಪಕ್ಷದಲ್ಲಿ ಈ ಕನಸುಗಳನ್ನು ನೋಡುವುದು ಶುಭವಂತೆ.

ನಿಮ್ಮ ಕನಸಿನಲ್ಲಿ ತಂದೆ ಅಥವಾ ನಿಮ್ಮ ಹಿಂದಿನ ತಲೆಮಾರಿನವರು ಸಂತೋಷವಾಗಿರುವುದು ಕಂಡುಬಂದರೆ ಅದು ಶುಭದ ಸಂಕೇತವಂತೆ. ಇದರಿಂದ ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಂತೆ. ನಿಮಗೆ ಹಣದ ಲಾಭವೂ ಆಗಲಿದೆಯಂತೆ.

ಕನಸಿನಲ್ಲಿ ನಿಮ್ಮ ಪಿತೃಗಳಿಗೆ ತಿಂಡಿ ತಿನ್ನಿಸುವುದು ಕಂಡುಬಂದರೆ ಅದು ಒಳ್ಳೆಯದಂತೆ. ಇದರಿಂದ ನಿಮ್ಮ ಆಸೆಗಳು ಈಡೇರುತ್ತದೆಯಂತೆ. ನೀವು ಹಣವನ್ನು ಗಳಿಸುತ್ತೀರಂತೆ.

ಕೊರಿಯನ್ ಮಹಿಳೆಯರು ಸೌಂದರ್ಯವನ್ನು ಹೆಚ್ಚಿಸಲು ಈ ಚಹಾ ಕುಡಿಯುತ್ತಾರಂತೆ….!

ಆದರೆ ಕನಸಿನಲ್ಲಿ ತಂದೆ ಅಳುತ್ತಿರುವುದು ಕಂಡುಬಂದರೆ ಅದು ಅಶುಭದ ಸಂಕೇತವಂತೆ. ಮುಂಬರುವ ದಿನಗಳಲ್ಲಿ ನೀವು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆಯಂತೆ. ನಿರ್ಮಾಣದಲ್ಲಿರುವ ನಿಮ್ಮ ಕಾರ್ಯ ಅರ್ಧಕ್ಕೆ ನಿಲ್ಲುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...