Kannada Duniya

ನರಕ ಚತುರ್ದಶಿಯ ದಿನ ಈ ಕ್ರಮಗಳನ್ನು ಪಾಲಿಸಿದರೆ ಹನುಮಂತನ ಅನುಗ್ರಹ ಪಡೆಯಬಹುದು

ನರಕ ಚತುರ್ದಶಿಯನ್ನು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಆಚರಿಸಲಾಗುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಈ ದಿನ ಹನುಮಂತನು ಜನಿಸಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ಈ ದಿನ ಹನುಮಂತನನ್ನು ಪೂಜಿಸಲಾಗುತ್ತದೆ. ಆದಕಾರಣ ನರಕ ಚತುರ್ದಶಿಯ ದಿನ ಈ ಕ್ರಮಗಳನ್ನು ಪಾಲಿಸಿದರೆ ಹನುಮಂತನ ಅನುಗ್ರಹ ಪಡೆಯಬಹುದು.

 

ನಿಮ್ಮ ಜೀವನದಲ್ಲಿ ಬಿಕ್ಕಟ್ಟು ಮತ್ತು ಸಂಕಟವನ್ನು ಅಂತ್ಯಗೊಳಿಸಲು ನರಕ ಚತುರ್ದಶಿಯಂದು ಹನುಮಂತನಿಗೆ ಪ್ರಿಯವಾದ ಚೋಳವನ್ನು ಅರ್ಪಿಸಬೇಕು. ಇದರಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ.

 

ಹಾಗೇ ಅಂದು ಹನುಮಂತನಿಗೆ ಬೂಂದಿ ಅಥವಾ ಲಡ್ಡುಗಳನ್ನು ಅರ್ಪಿಸಿ. ಇಲ್ಲವಾದರೆ ಹನುಮಂತನಿಗೆ ತೆಂಗಿನಕಾಯಿಯನ್ನು ಅರ್ಪಿಸಿ. ಇದರಿಂದ ಕೂಡ ತೊಂದರೆಗಳು ನಿವಾರಣೆಯಾಗುತ್ತದೆ.

ನವೆಂಬರ್ 16ರಂದು ಸೂರ್ಯ ವೃಶ್ಚಿಕರಾಶಿಗೆ ಸಾಗಲಿದ್ದಾನೆ, ಇದರಿಂದ ಈ ರಾಶಿಚಕ್ರದವರು ಲಾಭವನ್ನು ಪಡೆಯುತ್ತಾರೆ

ನೀವು ವ್ಯಾಪಾರದಲ್ಲಿ ಲಾಭವನ್ನು ಪಡೆಯಲು ಬಯಸಿದ್ದರೆ ಹನುಮಂತನಿಗೆ ಸಿಂಧೂರವನ್ನು ಅರ್ಪಿಸಿ. ಮತ್ತು ಅಂದು ಕೇಸರಿ ಬಣ್ಣದ ಬಟ್ಟೆಯನ್ನು ಧರಿಸಿ.

 

ನಕರಾತ್ಮಕ ಶಕ್ತಿಯನ್ನು ನಿವಾರಿಸಲು ಹನುಮಂತನಿಗೆ ಗುಲಾಬಿ ಮಾಲೆಯನ್ನು ಅರ್ಪಿಸಿ. ತೆಂಗಿನ ಕಾಯಿಯ ಮೇಲೆ ಸ್ವಸ್ತಿಕ ಬರೆದು ಹನುಮಂತನ ಪಾದಗಳಿಗೆ ಅರ್ಪಿಸಿ. ದೇಶಿ ತುಪ್ಪದಿಂದ ತಯಾರಿಸಿದ ರೊಟ್ಟಿಯನ್ನು ಅರ್ಪಿಸಿ ಬಡವರಿಗೆ ನೀಡಿ. ಇದರಿಂದ ನಿಮ್ಮ ಕೆಟ್ಟ ಕಾಲ ಕೊನೆಗೊಳ್ಳುತ್ತದೆ. ಇದರಿಂದ ನಿಮ್ಮ ಆಸೆಗಳು ಈಡೇರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...