Kannada Duniya

ಕಾರ್ತಿಕ ಮಾಸದಲ್ಲಿ ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆಯಲು ಈ ಕೆಲಸ ಮಾಡಿ

ಹಿಂದೂಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ವಿಶೇಷ ಮಹತ್ವವಿದೆ. ಈ ಮಾಸದಲ್ಲಿ ವಿಷ್ಣು ಮತ್ತು ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ. ಅದರಂತೆ ಅಕ್ಟೋಬರ್ 29ರಿಂದ ಕಾರ್ತಿಕ ಮಾಸ ಪ್ರಾರಂಭವಾಗಲಿದೆ. ಈ ಸಮಯದಲ್ಲಿ ಲಕ್ಷ್ಮಿದೇವಿಯ ಅನುಗ್ರಹವನ್ನು ಪಡೆಯಲು ಈ ಕೆಲಸ ಮಾಡಿ.

ಕಾರ್ತಿಕ ಮಾಸದಲ್ಲಿ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನಾಧಿಗಳನ್ನು ಮಾಡಿ ತುಳಸಿಗೆ ನೀರನ್ನು ಹಾಕಿ. ಇದರಿಂದ ಲಕ್ಷ್ಮಿದೇವಿ ಸಂತೋಷಗೊಳ್ಳುತ್ತಾಳೆ. ಹಾಗೇ ತುಳಸಿಗೆ ನೀರನ್ನು ಅರ್ಪಿಸುವಾಗ ಅದರ ಜೊತೆಗೆ ಹಾಲನ್ನು ಅರ್ಪಿಸಿದರೆ ಒಳ್ಳೆಯದು.

ಹಾಗೇ ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಯ ಬಳಿಕ ಅದರ ಬುಡದಲ್ಲಿರುವ ಮಣ್ಣನ್ನು ಹಣೆಗೆ ಹಚ್ಚಿಕೊಳ್ಳಿ. ಇದರಿಂದ ನಿಮಗೆ ಲಕ್ಷ್ಮಿದೇವಿಯ ಅನುಗ್ರಹದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ.

ನೀವು ಬೆಳಿಗ್ಗೆ ಈ ನೀರು ಕುಡಿದ್ರೆ ಈ ಎಲ್ಲಾ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ…!

ಹಾಗೇ ಕಾರ್ತಿಕ ಮಾಸದಲ್ಲಿ ವಿಷ್ಣು ದೇವಾಲಯಕ್ಕೆ ತೆರಳಿ ವಿಷ್ಣುವಿಗೆ ಬೇಳೆಕಾಳುಗಳನ್ನು ಅರ್ಪಿಸಿ. ಇದರಿಂದ ಲಕ್ಷ್ಮಿ ಮತ್ತು ವಿಷ್ಣು ಪ್ರಸನ್ನರಾಗುತ್ತಾರೆ. ಹಾಗೇ ಈ ಮಾಸದಲ್ಲಿ ತುಳಸಿ ಗಿಡವನ್ನು ನೆಟ್ಟರೆ ಒಳ್ಳೆಯದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...