Kannada Duniya

ಕನಸಿನಲ್ಲಿ ಸೂರ್ಯ ಮತ್ತು ಗ್ರಹಣವನ್ನು ನೋಡುವುದು ಶುಭವೇ?

ಸ್ವಪ್ನ ಶಾಸ್ತ್ರದಲ್ಲಿ ತಿಳಿಸಿದಂತೆ ಕನಸುಗಳು ನಮ್ಮ ಭವಿಷ್ಯದಲ್ಲಿ ಘಟಿಸುವುದನ್ನು ತಿಳಿಸುತ್ತದೆಯಂತೆ. ಹಾಗಾಗಿ ನಮ್ಮ ಮುಂದಿನ ಭವಿಷ್ಯದಲ್ಲಿ ಆಗುವುದನ್ನು ಮೊದಲೇ ಎಚ್ಚರಿಸುವ ಸಲುವಾಗಿ ಕನಸುಗಳು ಬೀಳುತ್ತದೆ. ಹಾಗಾದ್ರೆ ನಿಮ್ಮ ಕನಸಿನಲ್ಲಿ ನೀವು ಸೂರ್ಯ ಗ್ರಹವಣವನ್ನು ನೋಡುವುದು ಶುಭವೇ? ಎಂಬುದನ್ನು ತಿಳಿಯಿರಿ.

ನೀವು ಕನಸಿನಲ್ಲಿ ಸೂರ್ಯದೇವನನ್ನು ನೋಡುವುದು ಬಹಳ ಶುಭವಂತೆ. ಇದರರ್ಥ ನಿಮಗೆ ಶೀಘ್ರದಲ್ಲಿಯೇ ಶುಭ ಫಲಿತಾಂಶಗಳು ಸಿಗಲಿವೆಯಂತೆ. ಮತ್ತು ನಿಮ್ಮ ಜೀವನದಲ್ಲಿ ನೀವು ಏಳಿಗೆಯನ್ನು ಕಾಣುತೀರಂತೆ. ಅಲ್ಲದೇ ಕನಸಿನಲ್ಲಿ ನೀವು ಸೂರ್ಯದೇವನಿಗೆ ಅರ್ಘ್ಯವನ್ನು ಅರ್ಪಿಸುವುದು ಕಂಡುಬಂದರೆ ಇದರಿಂದ ನಿಮ್ಮ ದುಃಖಗಳು ದೂರವಾಗುತ್ತದೆಯಂತೆ.

ಆದರೆ ಕನಸಿನಲ್ಲಿ ಸೂರ್ಯಗ್ರಹಣವನ್ನು ನೋಡುವುದು ಒಳ್ಳೆಯದಲ್ಲವಂತೆ. ಮುಂದಿನ ದಿನಗಳಲ್ಲಿ ನಿಮ್ಮ ಕೆಲಸಕ್ಕೆ ಅಡ್ಡಿಯುಂಟಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆಯಂತೆ. ಮತ್ತು ಅನೇಕ ಸಮಸ್ಯೆಗಳು ಬಂದು ನಿಮ್ಮನ್ನು ಕಾಡುತ್ತದೆ ಎಂಬುದರ ಸೂಚನೆಯಾಗಿದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...