Kannada Duniya

ಕನಸಿನಲ್ಲಿ ಶ್ರೀರಾಮನನ್ನು ನೋಡಿದರೆ ಏನಾಗುತ್ತದೆ ಗೊತ್ತಾ?

ನಿದ್ರೆಯಲ್ಲಿ ಎಲ್ಲರಿಗೂ ಕನಸು ಬೀಳುತ್ತದೆ. ಕನಸುಗಳು ನಮ್ಮ ಮುಂದಿನ ಭವಿಷ್ಯದ ಬಗ್ಗೆ ಸೂಚಿಸುತ್ತದೆ ಎಂದು ಹೇಳುತ್ತಾರೆ. ಅದರಂತೆ ಕೆಲವು ಕನಸುಗಳು ಕೆಟ್ಟದಾಗಿದ್ದರೆ ಕೆಲವು ಖುಷಿಯನ್ನು ನೀಡುತ್ತದೆ. ಆದರೆ ಸಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಶ್ರೀರಾಮನ್ನು ನೋಡಿದರೆ ಏನರ್ಥ ಎಂಬುದನ್ನು ತಿಳಿಯಿರಿ.

ಕನಸಿನಲ್ಲಿ ಭಗವಾನ್ ಶ್ರೀರಾಮನ್ನು ನೋಡಿದರೆ ಇದು ಶುಭದ ಸಂಕೇತವಂತೆ. ಇದರರ್ಥ ಮುಂಬರುವ ದಿನಗಳಲ್ಲಿ ನೀವು ಒಳ್ಳೆಯ ಸುದ್ದಿಯನ್ನು ಕೇಳುತ್ತೀರಂತೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಅದು ನಿವಾರಣೆಯಾಗುತ್ತದೆಯಂತೆ.

ಹಾಗೇ ಕನಸಿನಲ್ಲಿ ಶ್ರೀರಾಮನ ದೇವಾಲಯವನ್ನು ನೋಡಿದರೆ ಇದರಿಂದ ನಿಮ್ಮ ಅದೃಷ್ಟ ಒಲಿಯುತ್ತದೆಯಂತೆ. ನೀವು ಶೀಘ್ರದಲ್ಲಿಯೇ ಗುರಿಯನ್ನು ಮುಟ್ಟುತ್ತೀರಂತೆ. ನೀವು ಸಾಲ ನೀಡಿದ ಹಣ ಮರಳಿ ಬರಲಿದೆಯಂತೆ.

ಅಲ್ಲದೇ ನೀವು ಕನಸಿನಲ್ಲಿ ಶ್ರೀರಾಮನ ಜೊತೆ ಹನುಮಂತನನ್ನು ನೋಡಿದರೆ ನಿಮಗೆ ಒಳ್ಳೆಯ ಸುದ್ಧಿ ಸಿಗಲಿದೆಯಂತೆ. ನಿಮ್ಮ ಒತ್ತಡಗಳು ನಿವಾರಣೆಯಾಗುತ್ತದೆಯಂತೆ. ನಿಮ್ಮ ಸಂಕಷ್ಟಗಳು ದೂರವಾಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...