Kannada Duniya

ಈ ಸ್ಥಳದಲ್ಲಿ ಡ್ರೆಸ್ಸಿಂಗ್ ಟೇಬಲ್ ಇರಿಸಿದರೆ ನಿಮ್ಮ ಅದೃಷ್ಟ ಬದಲಾಯಿಸಬಹುದು….!

ಮನೆಯಲ್ಲಿರುವ ಪ್ರತಿಯೊಂದು ವಸ್ತುವನ್ನು ವಾಸ್ತು ಪ್ರಕಾರ ಇಟ್ಟುಕೊಂಡರೆ ಮನೆಯಲ್ಲಿ ಸಂತೋಷ, ಸಮೃದ್ದಿ ನೆಲೆಸಿರುತ್ತದೆ. ಮನೆಯಲ್ಲಿ ಪೀಠೋಪಕರಣಗಳನ್ನು ಇಡಲು ಕೆಲವು ನಿಯಮಗಳಿವೆ. ಹಾಗಾಗಿ ಮನೆಯಲ್ಲಿಡುವ ಡ್ರೆಸ್ಸಿಂಗ್ ಟೇಬಲ್ ಸಹ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು. ಹಾಗಾಗಿ ಅದನ್ನು ಸರಿಯಾದ ಸ್ಥಳದಲ್ಲಿ ಇಡಿ.

ನೀವು ಡ್ರೆಸ್ಸಿಂಗ್ ಟೇಬಲ್ ಅನ್ನು ಇರಿಸಲು ಮನೆಯ ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕು ಉತ್ತಮವಾಗಿದೆ. ಡ್ರೆಸ್ಸಿಂಗ್ ಟೇಬಲ್ ನಲ್ಲಿ ಮಹಿಳೆಯರು ಮೇಕಪ್ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ ಮತ್ತು ಮೇಕಪ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಮಹಿಳೆಯರು ಈ ದಿಕ್ಕಿನಲ್ಲಿ ಕುಳಿತುಕೊಂಡು ಮೇಕಪ್ ಮಾಡಿದರೆ ಅದೃಷ್ಟ ಬದಲಾಗುತ್ತದೆ. ಡ್ರೆಸ್ಸಿಂಗ್ ಟೇಬಲ್ ಅನ್ನು ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿಟ್ಟರೆ ಗಂಡ ಹೆಂಡತಿಯ ನಡುವೆ ಸಾಮರಸ್ಯ ಬೆಳೆಯುತ್ತದೆ.

ಮಲಗುವ ಕೋಣೆ ಆರಾಮದಾಯಕವಾಗಿರಲು ಇವುಗಳನ್ನು ಹೊಂದಿರಬೇಕು

ಇದನ್ನು ನೈರುತ್ಯ ದಿಕ್ಕಿನಲ್ಲಿಟ್ಟರೆ ನಿಮ್ಮ ದಾಂಪತ್ಯ ಜೀವನ ಕೆಡುತ್ತದೆ. ಪರಸ್ಪರ ಜಗಳವಾಗುತ್ತಿರುತ್ತದೆ. ಡ್ರೆಸ್ಸಿಂಗ್ ಟೇಬಲ್ ಅನ್ನು ಆಗ್ನೇಯ ದಿಕ್ಕಿನಲ್ಲಿಟ್ಟುಕೊಂಡರೆ ನಕರಾತ್ಮಕ ಪರಿಣಾಮ ಬೀರುತ್ತದೆ. ಮನೆಯ ಜನರಿಗೆ ಅಪಘಾತವಾಗುತ್ತದೆ. ಮತ್ತು ಇದು ಸಂಗಾತಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಡ್ರೆಸ್ಸಿಂಗ್ ಟೇಬಲ್ ಅನ್ನು ಮಲಗುವ ಕೋಣೆಯಲ್ಲಿಟ್ಟರೆ ತಪ್ಪಿಲ್ಲ ಆದರೆ ಮಲಗುವಾಗ ಅದರಲ್ಲಿರುವ ಕನ್ನಡಿಯಲ್ಲಿ ನಿಮ್ಮ ಮುಖ ತೋರದಂತೆ ಇಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...