Kannada Duniya

ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆಯನ್ನು ನಿವಾರಿಸಲು ಈ ಸಲಹೆ ಪಾಲಿಸಿ

ಬೇಸಿಗೆ ಕಾಲ ಶುರುವಾಗಿದೆ. ಈ ಸಮಯದಲ್ಲಿ ಹೊರಗಡೆ ಬಿಸಿಲಿನ ತಾಪ ಅಧಿಕವಾಗಿರುತ್ತದೆ. ಇದರಿಂದ ದೇಹದ ಉಷ್ಣತೆ ಹೆಚ್ಚಾಗಿ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದಕಾರಣ ಈ ನಿರ್ಜಲೀಕರಣ ಸಮಸ್ಯೆಯನ್ನು ನಿವಾರಿಸಲು ಈ ಸಲಹೆ ಪಾಲಿಸಿ.

ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆಯನ್ನು ತಪ್ಪಿಸಲು ಸಾಕಷ್ಟು ನೀರನ್ನು ಕುಡಿಯಿರಿ. ಇದು ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸುತ್ತದೆ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಇದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ.

ಹಾಗೇ ಬೇಸಿಗೆಯಲ್ಲಿ ಬಾಯಾರಿಕೆ ಆಗುವ ತನಕ ಕಾಯಬೇಡಿ. ಗಂಟೆಗೊಮ್ಮೆ ನೀರು ಕುಡಿಯುತ್ತಲಿರಿ. ಮತ್ತು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ 2 ಲೋಟ ನೀರು ಕುಡಿಯಿರಿ.

ಹಾಗೇ ಒಣ ಬಾಯಿ ಸಮಸ್ಯೆ ಕಾಡಿದರೆ ದೇಹದಲ್ಲಿ ನೀರಿನ ಕೊರತೆಯಾಗಿದೆ ಎಂಬುದನ್ನು ತಿಳಿಯಿರಿ. ಹಾಗಾಗಿ ಬಾಯಿ ಒಣಗುವಾಗ ತಕ್ಷಣ ನೀರನ್ನು ಕುಡಿಯಿರಿ.

ಸಾಮಾನ್ಯವಾಗಿ ದೇಹಕ್ಕೆ ದಿನಕ್ಕೆ 8 ಗ್ಲಾಸ್ ನೀರು ಕುಡಿಯಬೇಕು. ಆದರೆ ಬೇಸಿಗೆಯಲ್ಲಿ ಮಹಿಳೆಯರು 11 ಗ್ಲಾಸ್ ಮತ್ತು ಪುರುಷರು 15 ಗ್ಲಾಸ್ ನೀರನ್ನು ಕುಡಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...