Kannada Duniya

ವ್ಯಾಯಾಮದ ನಂತರ ಕಂಡುಬರುವ ಈ ಸಮಸ್ಯೆಗಳು ಹೃದ್ರೋಗ ಸಮಸ್ಯೆಯನ್ನು ಸೂಚಿಸುತ್ತದೆಯಂತೆ

ವ್ಯಾಯಾಮ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಮಧುಮೇಹ, ರಕ್ತದೊತ್ತಡ, ಬೊಜ್ಜಿನ ಸಮಸ್ಯೆಗೆ ಕಾರಣವಾಗುತ್ತದೆಯಂತೆ. ಆದರೆ ದಿನವಿಡೀ ವ್ಯಾಯಾಮ ಮಾಡುವುದು ಸರಿಯಲ್ಲ. ಅಲ್ಲದೇ ವ್ಯಾಯಾಮದ ನಂತರ ಕಂಡುಬರುವ ಈ ಸಮಸ್ಯೆಗಳು ಹೃದ್ರೋಗ ಸಮಸ್ಯೆಯನ್ನು ಸೂಚಿಸುತ್ತದೆಯಂತೆ.

ನೀವು ವ್ಯಾಯಾಮ ಮಾಡಿದ ನಂತರ ಎದೆಯಲ್ಲಿ ನೋವು ಕಂಡುಬಂದರೆ ಅಥವಾ ಎಡಗೈ ಅಥವಾ ದವಡೆಯಲ್ಲಿ ನೋವು ಕಂಡುಬಂದರೆ ಅದು ಹೃದಯಾಘಾತದ ಲಕ್ಷಣವಂತೆ.

ಹಾಗೇ ನೀವು ವ್ಯಾಯಾಮ ಮಾಡುವಾಗ ಅಥವಾ ವ್ಯಾಯಾಮದ ನಂತರ ಉಸಿರಾಡಲು ಕಷ್ಟವಾದರೆ ಇದು ಹೃದ್ರೋಗದ ಲಕ್ಷಣವಂತೆ.

ಅಲ್ಲದೇ ವ್ಯಾಯಾಮ ಮಾಡಿದ ನಂತರ ಅತಿಯಾಗಿ ಸುಸ್ತಿನ ಸಮಸ್ಯೆ ಕಾಡುತ್ತಿದ್ದರೆ ಅದು ನಿಮ್ಮ ಹೃದಯದಲ್ಲಿ ಸಮಸ್ಯೆ ಇದೆ ಎಂಬುದನ್ನು ತಿಳಿಸುತ್ತದೆಯಂತೆ.

ಹಾಗೇ ವ್ಯಾಯಾಮ ಮಾಡಿದ ಬಳಿಕ ನಿಮ್ಮ ಹೃದಯದ ವೇಗ ಹೆಚ್ಚಾದರೆ ಅದು ಹೃದಯ ಸಂಬಂಧಿ ರೋಗದ ಲಕ್ಷಣವಾಗಿದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...