Kannada Duniya

New clothes: ಅಂಗಡಿಯಿಂದ ತಂದ ಒಳ ಉಡುಪುಗಳನ್ನು ತೊಳೆಯದೆ ಧರಿಸಿದರೆ ಪರಿಣಾಮ ಗೊತ್ತಾ..?

ಗಡಿಬಿಡಿಯಲ್ಲಿ ಮಾರುಕಟ್ಟೆಯಿಂದ ಹೊಸದಾಗಿ ತಂದ ಒಳಉಡುಪುಗಳನ್ನು ತೊಳೆಯದೇ ಧರಿಸುತ್ತೀರಾ? ನೀವು ಹಲವು ಸೋಂಕುಗಳನ್ನು ಆಹ್ವಾನಿಸುತ್ತಿದ್ದೇವೆ ಎಂದೇ ಅರ್ಥ.

ಮನುಷ್ಯನ ಗುಪ್ತಾಂಗಗಳ ತ್ವಚೆ ಬಲು ಸೂಕ್ಷ್ಮವಾಗಿರುತ್ತದೆ. ಹೊಸ ಉಡುಪುಗಳನ್ನು ತೊಳೆಯದೆ ಧರಿಸುವುದರಿಂದ ಅದಕ್ಕೆ ಬಳಸಿದ ಬಣ್ಣಗಳು ಹಾಗೂ ಶಿಲೀಂಧ್ರಗಳು ನಿಮ್ಮ ಜನನಾಂಗವನ್ನು ಸ್ಪರ್ಶಿಸಿ ಹಲವು ಚರ್ಮರೋಗಗಳನ್ನು ಆಹ್ವಾನಿಸಬಹುದು.ಬ್ಯಾಕ್ಟೀರಿಯಾ ಗಳಿಂದಲೂ ಸೋಂಕು ಕಾಣಿಸಿಕೊಳ್ಳಬಹುದು.

ಹೊಲಿಯುವ ವೇಳೆ ಅಥವಾ ಪ್ಯಾಕಿಂಗ್ ಸಂದರ್ಭದಲ್ಲಿ ಉಡುಪಿನಲ್ಲಿ ಮನೆಮಾಡಿರುವ ಬ್ಯಾಕ್ಟೀರಿಯಾಗಳು ನಿಮ್ಮ ಗುಪ್ತ ಭಾಗಗಳಿಗೆ ಅಲರ್ಜಿಯನ್ನುಂಟು ಮಾಡಬಹುದು.

ಸಲಾಡ್ ತಯಾರಿಸುವಾಗ ಈ ಸಲಹೆಗಳನ್ನು ಪಾಲಿಸಿದರೆ ಆರೋಗ್ಯಕರವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು…!

ಅದರಲ್ಲೂ ಹಾಲುಣಿಸುವ ತಾಯಂದಿರು ತಮ್ಮ ಹೊಸ ಒಳ ಉಡುಪುಗಳನ್ನು ತೊಳೆಯದೇ ಧರಿಸುವುದರಿಂದ ಹಲವು ಬ್ಯಾಕ್ಟೀರಿಯಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕ್ರಮೇಣ ದದ್ದುಗಳು ಮೂಡಿ ತ್ವಚೆಯಲ್ಲಿ ನವೆ ಕಾಣಿಸಿಕೊಳ್ಳಬಹುದು. ಮುಂದೆ ಇದು ಗಂಭೀರ ಸಮಸ್ಯೆಗೆ ಕಾರಣವಾಗಬಹುದು.

ಹಾಗಾಗಿ ಮಾರುಕಟ್ಟೆಯಿಂದ ತಂದ ಯಾವುದೇ ಹೊಸ ಉಡುಪುಗಳನ್ನು (ಅದು ಒಳಉಡುಪು ಆಗಿರಲಿ ಶರ್ಟ್ ಪ್ಯಾಂಟ್ ಆಗಿರಲಿ) ತೊಳೆಯದೇ ಧರಿಸುವ ತಪ್ಪು ಮಾಡದಿರಿ.

Always wash new clothes before wearing


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...