Kannada Duniya

ಋತುಬಂಧದ ನಂತರ ಲೈಂಗಿಕತೆಗೆ ಸಂಬಂಧಿಸಿದ ಈ ಸಲಹೆ ಪಾಲಿಸಿ

ಋತುಬಂಧದ ಸಮಯದಲ್ಲಿ ಹಾರ್ಮೋನ್ ನಲ್ಲಿ ಹಲವು ಬದಲಾವಣೆಗಳಾಗುತ್ತದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಲೈಂಗಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಋತುಬಂಧದ ನಂತರ ಈ ಲೈಂಗಿಕ ಸಲಹೆಗಳನ್ನು ಅನುಸರಿಸಿ.

ಋತುಬಂಧದ ನಂತರ ನಿಯಮಿತವಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಸಂಭೋಗಕ್ಕೂ ಮೊದಲು ಯೋನಿ ಲೂಬ್ರಿಕಂಟ್ ಅನ್ನು ಹಚ್ಚಿ. ಯೋನಿಯಲ್ಲಿ ಶುಷ್ಕತೆಯನ್ನು ಉಂಟುಮಾಡುವಂತಹ ಸಾಬೂನುಗಳು, ಎಣ್ಣೆಗಳನ್ನು ತಪ್ಪಿಸಿ.

ಯೋನಿಯನ್ನು ಸ್ವಚ್ಛಗೊಳಿಸಲು ಬಿಸಿ ನೀರಿನ ಬದಲು ಉಗುರು ಬೆಚ್ಚಗಿರುವ ನೀರನ್ನು ಬಳಸಿ. ಹಾಗೇ ಫೋರ್ಪ್ಲೆ ಅಥವಾ ಲೈಂಗಿಕ ಪ್ರಚೋದನೆಯನ್ನು ಉತ್ತೇಜಿಸುವಂತಹ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಹಾಗೇ ಒತ್ತಡವನ್ನು ನಿವಾರಿಸುವಂತಹ ವ್ಯಾಯಾಮಗಳನ್ನು ಅಭ್ಯಾಸ ಮಾಡುತ್ತೀರಿ. ಹೊಸದು ಅಥವಾ ವಿಭಿನ್ನ ಲೈಂಗಿಕ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸಿ. ಇದರಿಂದ ಉತ್ಸಾಹ ಹೆಚ್ಚಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...