Kannada Duniya

ಅಸ್ತಮಾ ರೋಗಕ್ಕೆ ಇಲ್ಲಿದೆ ನೋಡಿ ರಾಮಬಾಣ…!

ಮಾವಿನ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ವಿಟಮಿನ್, ಖನಿಜಗಳು, ಕ್ಯಾಲ್ಸಿಯಂ, ಮೆಗ್ನಿಸಿಯಂ, ಪೊಟ್ಯಾಸಿಯಂ, ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ. ಹಾಗೇ ಮಾವಿನ ಎಲೆ ಕೂಡ ಆರೋಗ್ಯಕ್ಕೆ ತುಂಬಾ ಉತ್ತಮ. ಮಾವಿನ ಎಲೆಗಳನ್ನು ಬಳಸಿ ಬೊಜ್ಜು, ಮಧುಮೇಹ, ರಕ್ತಹೀನತೆ ಮತ್ತು ಹೃದ್ರೋಗ ಸಮಸ್ಯೆಯನ್ನು ನಿವಾರಿಸಬಹುದು. ಅಲ್ಲದೇ ಮಾವಿನ ಎಲೆಗಳನ್ನು ಬಳಸಿ ಅಸ್ತಮಾವನ್ನು ಕೂಡ ಪರಿಹರಿಸಿಕೊಳ್ಳಬಹುದಂತೆ.

ಮಾವಿನ ಎಲೆಗಳನ್ನು ಸೇವಿಸುವುದರಿಂದ ಅಸ್ತಮಾವನ್ನು ನಿಯಂತ್ರಣದಲ್ಲಿಡಬಹುದು ಎಂಬುದಾಗಿ ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಇದರಿಂದ ಉಸಿರಾಟದ ಸಮಸ್ಯೆ ದೂರವಾಗುತ್ತದೆ. ಈ ಬಗ್ಗೆ ಇಬ್ಬರ ಮೇಲೆ ಸಂಶೋಧನೆ ಮಾಡಲಾಗಿದ್ದು, ಅವರಿಗೆ ಸತತ ಮೂರು ತಿಂಗಳು ಮಾವಿನ ಎಲೆಗಳ ಪುಡಿಯಿಂದ ತಯಾರಿಸಿದ ಕ್ಯಾಪ್ಸುಲ್ ಗಳನ್ನು ನೀಡಲಾಗಿದೆ. ಅದರಿಂದ ಅವರಿಗಿರುವ ಉಸಿರಾಟದ ಸಮಸ್ಯೆ ನಿಯಂತ್ರಣಕ್ಕೆ ಬಂದಿರುವುದು ತಿಳಿದುಬಂದಿದೆ.

ಮಧುಮೇಹಿಗಳು ದಿನದಲ್ಲಿ ಎಷ್ಟು ಮಾವಿನ ಹಣ್ಣನ್ನು ಸೇವಿಸಬಹುದು ಗೊತ್ತಾ?

ಹಾಗಾಗಿ ಅಸ್ತಮಾ ರೋಗಿಗಳು ಮಾವಿನ ಎಲೆಗಳಿಂದ ಕಷಾಯ ತಯಾರಿಸಿ ಕುಡಿಯಬಹುದು. ಇಲ್ಲವಾದರೆ ಮಾವಿನ ಎಲೆಗಳನ್ನು ಪುಡಿ ಮಾಡಿ ಅದನ್ನು ನೀರು ಅಥವಾ ಹಾಲಿನೊಂದಿಗೆ ಬೆರೆಸಿ ಪ್ರತಿದಿನ ಸೇವಿಸಿ. ಇದರಿಂದ ಅಸ್ತಮಾ ನಿಯಂತ್ರಣಕ್ಕೆ ಬರುತ್ತದೆ.

 

 

Mango leaves can be used to treat Asthma


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...