Kannada Duniya

ಕಿಡ್ನಿ ಸಮಸ್ಯೆ ಇರುವವರು ಆವಕಾಡೊ ತಿಂದರೆ ಏನಾಗುತ್ತದೆ ಗೊತ್ತಾ?

ಆವಕಾಡೊ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಇದರಲ್ಲಿ ಆರೋಗ್ಯಕರ ಕೊಬ್ಬುಗಳು, ಫೈಬರ್, ಜೀವಸತ್ವಗಳು, ಮತ್ತು ಖನಿಜಗಳು ಸಮೃದ್ಧವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದನ್ನು ಕಿಡ್ನಿ ಸಮಸ್ಯೆ ಇದ್ದವರು ಸೇವಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ.

ಆವಕಾಡೊ ಹಲವು ರೋಗಗಳಿಗೆ ರಾಮಬಾಣವಾಗಿದೆ. ಆದರೆ ಕಿಡ್ನಿ ಕಾಯಲೆ ಇರುವವರಿಗೆ ಇದು ಹಾನಿಕಾರಕವಾಗಿದೆ. ಕಿಡ್ನಿ ದೇಹದಲ್ಲಿರುವ ಪೊಟ್ಯಾಶಿಯಂ ಅನ್ನು ನಿಯಂತ್ರಿಸುತ್ತದೆ. ಆದರೆ ಕಿಡ್ನಿಯಲ್ಲಿ ಸಮಸ್ಯೆ ಇದ್ದಾಗ ಪೊಟ್ಯಾಶಿಯಂ ರಕ್ತದಲ್ಲಿ ಶೇಖರಣೆಯಾಗುತ್ತದೆ.

ಆವಕಾಡೊದಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿರುವ ಕಾರಣ, ಇದನ್ನು ಸೇವಿಸಿದರೆ ಕಿಡ್ನಿ ಸಮಸ್ಯೆ ಇರುವವರಿಗೆ ಇದು ಮಾರಕವಾಗಬಹುದು. ಅಲ್ಲದೇ ರಕ್ತದಲ್ಲಿ ಪೊಟ್ಯಾಶಿಯಂ ಪ್ರಮಾಣ ಹೆಚ್ಚಾದಾಗ ಹೃದಯದ ಬಡಿತದಲ್ಲಿ ಅಸಹಜತೆ ಉಂಟಾಗುತ್ತದೆ. ಇದು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...