Kannada Duniya

ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚು ಗೊಳಿಸುವುದು ಗೊತ್ತಾ…?

ಈ ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪಾನೀಯಗಳು ಯಾವುದು ಎಂಬುದರ ಬಗ್ಗೆ ತಿಳಿಯೋಣ.

ಕಿತ್ತಳೆ, ದ್ರಾಕ್ಷಿ ಮತ್ತು ಸಿಟ್ರಸ್ ಹಣ್ಣುಗಳ ಜ್ಯೂಸ್ ಕುಡಿಯುವುದರಿಂದ ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ದೇಹಕ್ಕೆ ಲಭ್ಯವಾಗುತ್ತದೆ. ಹಾಗಾಗಿ ಇವುಗಳಲ್ಲಿ ಒಂದು ಬಗೆಯನ್ನಾದರೂ ನಿತ್ಯ ಸೇವಿಸಿ.

ಗ್ರೀನ್ ಆಪಲ್, ಕ್ಯಾರೆಟ್ ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಬೀಟ್ ರೂಟ್ ಗೆ ಕ್ಯಾರೆಟ್ ಮತ್ತು ಶುಂಠಿ ಬೆರೆಸಿ ಜ್ಯೂಸ್ ತಯಾರಿಸುವುದರಿಂದ ಬ್ಯಾಕ್ಟೀರಿಯಾದಿಂದ ಹುಟ್ಟುವ ಶೀತ ಅಥವಾ ಜ್ವರ ಕೆಮ್ಮು ಮೊದಲಾದ ಸಮಸ್ಯೆಗಳು ದೂರವಾಗುತ್ತವೆ. ಸಂಧಿವಾತದ ಸಮಸ್ಯೆಗೂ ನಿವಾರಣೆ ಸಿಗುತ್ತದೆ.

ಚರ್ಮದ ಸಮಸ್ಯೆ ನಿವಾರಣೆಗೆ ಕುಂಬಳಕಾಯಿ ಫೇಸ್ ಪ್ಯಾಕ್ ಹಚ್ಚಿ

ಟೊಮೆಟೊ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಸಾಕಷ್ಟು ಪ್ರಮಾಣದ ವಿಟಮಿನ್ ಬಿ ನಿಮ್ಮ ದೇಹಕ್ಕೆ ಲಭ್ಯವಾಗುತ್ತದೆ. ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಸ್ಟ್ರಾಬೆರಿ ಹಣ್ಣು ಮತ್ತು ಕಿವಿ ಹಣ್ಣಿನ ಜ್ಯೂಸ್ ಗೆ ಕೆನೆರಹಿತ ಹಾಲು ಬೆರೆಸಿ ಕುಡಿಯುವುದರಿಂದ ದೇಹಕ್ಕೆ ವಿಟಮಿನ್ ಡಿ ದೊರೆಯುತ್ತದೆ. ಕಲ್ಲಂಗಡಿಹಣ್ಣಿನ ರಸ ಸ್ನಾಯುಗಳ ನೋವಿನಿಂದ ಬರುವ ಜ್ವರವನ್ನು ಕಡಿಮೆ ಮಾಡುತ್ತದೆ. ಪಾಲಕ್ ಸೊಪ್ಪಿನಿಂದ ತಯಾರಿಸಿದ ಜ್ಯೂಸ್ ಕೂಡಾ ಹಲವು ಸಮಸ್ಯೆಗಳನ್ನು ದೂರ ಮಾಡುತ್ತದೆ.

Try these immunity boosting juices to keep yourself healthy during this pandemic.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...