Kannada Duniya

ಚಹಾದಲ್ಲಿ ಸಕ್ಕರೆಯೊಂದಿಗೆ ಉಪ್ಪನ್ನು ಬೆರೆಸಿ ಈ ಪ್ರಯೋಜನ ಪಡೆಯಿರಿ

ಚಹಾ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಯಾಕೆಂದರೆ ಇದರಲ್ಲಿ ಕೆಫೀನ್ ಅಂಶ ಹೆಚ್ಚಾಗಿರುತ್ತದೆ ಮತ್ತು ಇದರಲ್ಲಿ ಸಕ್ಕರೆಯನ್ನು ಬೆರೆಸುವುದರಿಂದ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಚಹಾದಲ್ಲಿ ಸಕ್ಕರೆಯೊಂದಿಗೆ ಉಪ್ಪನ್ನು ಬೆರೆಸಿ ಕುಡಿದರೆ ಅನೇಕ ಆರೋಗ್ಯ ಪ್ರಯೋಜನವನ್ನು ಪಡೆಯಬಹುದಂತೆ.

ಚಹಾದಲ್ಲಿ ಸಕ್ಕರೆಯೊಂದಿಗೆ ಕಪ್ಪು ಉಪ್ಪನ್ನು ಮಿಕ್ಸ್ ಮಾಡಿ ಕುಡಿಯಿರಿ.ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು, ಇದು ಚಯಾಪಚಯ ಕ್ರಿಯೆ, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆಯಂತೆ. ಹಾಗೇ ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆಯಂತೆ.

ಹಾಗಾಗಿ ಚಹಾ ತಯಾರಿಸುವಾಗ ಟೀ ಪುಡಿ, ಸಕ್ಕರೆ , ಹಾಲಿನ ಜೊತೆ ಚಿಟಿಕೆಯಷ್ಟು ಕಪ್ಪು ಉಪ್ಪನ್ನು ಬೆರೆಸಿ. ಬ್ಲ್ಯಾಕ್ ಟೀ, ಗ್ರೀನ್ ಟೀ, ಲೆಮನ್ ಟೀಯಲ್ಲಿ ಕೂಡ ಕಪ್ಪು ಉಪ್ಪನ್ನು ಸೇರಿಸಬಹುದು. ಇದು ಚಹಾದ ಕಹಿ ಅಂಶವನ್ನು ನಿವಾರಿಸುತ್ತದೆ ಮತ್ತು ಚಹಾದ ಪರಿಮಳವನ್ನು ಹೆಚ್ಚಿಸುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...