Kannada Duniya

ನಿಮಗೆ  ಆಲ್ಕೋಹಾಲ್  ಅಭ್ಯಾಸವಿದೆಯೇ? ಹಾಗಾದರೆ ಇದು ನಿಮ್ಮ ಮಕ್ಕಳ ಮೇಲು ಪರಿಣಾಮ ಬೀರಬಹುದು…!  

ಇತ್ತೀಚಿನ ದಿನಗಳಲ್ಲಿ ಮನುಷ್ಯನ ಜೀವನ ಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಆಹಾರವನ್ನು ತಿನ್ನುವುದು. ಕುಡಿಯುವ  ನೀರು ಹೇಗೆ ಮಾನವ ಜೀವನದ ಒಂದು ಭಾಗವಾಗಿದೆಯೋ ಹಾಗೆ ಆಲ್ಕೋಹಾಲ್ ಮತ್ತು ಸಿಗರೇಟುಗಳು ಸಹ ಅದರ ಒಂದು ಭಾಗವಾಗಿದೆ ಎಂದು ಹೇಳಬಹುದು.

 ಇತ್ತೀಚಿನ  ದಿನಗಳಲ್ಲಿ, ಮಕ್ಕಳಿಂದ  ವಯಸ್ಕರವರೆಗೆ, ಎಲ್ಲರೂ  ಮಧ್ಯಪಾನದ  ವ್ಯಸನಿಯಾಗುತ್ತಿದ್ದಾರೆ.  ಕೆಒಮ್ಮೆ  ಮಧ್ಯಪಾನಕ್ಕೆ  ತೊಡಗಿಕೊಂಡರೆ ಅಂತಹ ವ್ಯೆಕ್ತಿಯನ್ನು ಸಮಾಜವು  ವಿಚಿತ್ರವಾಗಿ  ಪರಿಗಣಿಸುತ್ತದೆ..

ಇತ್ತೀಚೆಗೆ ವಿಶ್ವವಿದ್ಯಾಲಯದ ಸಂಶೋಧಕರು ಮದ್ಯಪಾನ ಮಾಡುವ ಅಭ್ಯಾಸವು ಹುಟ್ಟಲಿರುವ ಮಕ್ಕಳಿಗೂ ಅಪಾಯಕಾರಿ ಎಂದು ಬಹಿರಂಗಪಡಿಸಿದ್ದಾರೆ. ಪುರುಷನ ಕುಡಿತದ ಅಭ್ಯಾಸವು ಅವನ ಸಂಗಾತಿಯ ಗರ್ಭಧಾರಣೆಗೆ  ಅಡ್ಡಿಯಾಗುತ್ತದೆ. ಗರ್ಭಧಾರಣೆ  ಯಶಸ್ವಿಯಾದರೂ ಅದು ಭ್ರೂಣದ ಬೆಳವಣಿಗೆಯ ಮೇಲೆ  ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಮಧ್ಯಪಾನ ಮಾಡುವ ಅಭ್ಯಾಸದಿಂದಾಗಿ ಜನಿಸಿದ ಮಕ್ಕಳ ಮೆದುಳು ಮತ್ತು ಮುಖದ  ದೋಷಗಳಂತಹ  ಅಸ್ವಸ್ಥತೆಗಳು  ಸಂಭವಿಸುತ್ತದೆ.. ಅಂತಹ ಅಸ್ವಸ್ಥತೆಗಳು ದೈಹಿಕ ಸಮಸ್ಯೆಗಳು ಮತ್ತು ನಡವಳಿಕೆಯ ಕಲಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು  ಎಂದು ಎಚ್ಚರಿಕೆ ನೀಡಿದೆ.

 

 

 

 

 

 

 

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...