Kannada Duniya

ಮಧುಮೇಹಿಗಳಾಗಿದ್ದರೆ ಕಣ್ಣಿನ ಆರೋಗ್ಯಕ್ಕಾಗಿ ಈ ಆಹಾರಗಳನ್ನು ಸೇವಿಸಿ…!

ಪ್ರಪಂಚದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವ್ಯಕ್ತಿಗಳ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವುದರಿಂದ ಮಧುಮೇಹ ಸಮಸ್ಯೆ ಕಾಡುತ್ತದೆ. ಇದರಿಂದ ಹೃದಯ ಮತ್ತು ಕಣ್ಣಿನ ಸಮಸ್ಯೆಗಳಂತಹ ಅನೇಕ ಗಂಭೀರ ರೋಗಗಳ ಅಪಾಯ ಹೆಚ್ಚಾಗಬಹುದು. ಹಾಗಾಗಿ ಮಧುಮೇಹಿಗಳು ಕಣ್ಣಿನ ಬಗ್ಗೆ ಕಾಳಜಿವಹಿಸುವುದು ಅಗತ್ಯ. ಅದಕ್ಕಾಗಿ ಈ ಆಹಾರ ಸೇವಿಸಿ.

-ಸಕ್ಕರೆ ರೋಗಿಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ರಸವನ್ನು ಸೇವಿಸಿ. ಇದು ದೃಷ್ಟಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

-ಏಲಕ್ಕಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಕಣ್ಣುಗಳಿಗೆ ತಂಪನ್ನು ನೀಡುತ್ತದೆ. ಮತ್ತು ದೃಷ್ಟಿಯನ್ನು ಸುಧಾರಿಸುತ್ತದೆ.

-ಕಣ್ಣಿನ ಆರೋಗ್ಯಕ್ಕೆ ಕಬ್ಬಿಣಾಂಶ ಬಹಳ ಮುಖ್ಯ. ಹಾಗಾಗಿ ದೃಷ್ಟಿ ಹೆಚ್ಚಿಸಲು ನೀವು ಹಸಿರು ಎಲೆಗಳ ತರಕಾರಿಗಳನ್ನು ಸೇವಿಸಬಹುದು.

-ವಾಲ್ ನಟ್ಸ್ ನಲ್ಲಿರುವ ವಿಟಮಿನ್ ಇ ಮತ್ತು ಕೊಬ್ಬಿನಾಮ್ಲಗಳು ಕಣ್ಣಿನ ಆರೋಗ್ಯಕ್ಕೆ ಬಹಳ ಮುಖ್ಯ. ಹಾಗಾಗಿ ದೀರ್ಘಕಾಲದವರೆಗೆ ಕಣ್ಣುಗಳನ್ನು ಆರೋಗ್ಯವಾಗಿಡಲು ವಾಲ್ ನಟ್ಸ್ ಅನ್ನು ಆಹಾರದಲ್ಲಿ ಸೇರಿಸಿ.

Vastu tips : ತಿಜೋರಿ ಯಾವಾಗಲೂ ಹಣದಿಂದ ತುಂಬಿರಲು, ಇವುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಇಟ್ಟುಕೊಂಡರೆ ಹಣದ ಕೊರತೆ ಇರುವುದಿಲ್ಲ….!

-ಸಕ್ಕರೆ ರೋಗಿಗಳು ಕಣ್ಣಿನ ಆರೋಗ್ಯ ಕಾಪಾಡಲು ಬಾದಾಮಿಯನ್ನು ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

-ಹಾಗೇ ಸಿಹಿ ಪದಾರ್ಥಗಳು, ಮೈದಾ ಹಿಟ್ಟಿನ ಪದಾರ್ಥಗಳು, ಮತ್ತು ತಂಪು ಪಾನೀಯಗಳಿಂದ ದೂರವಿರಿ. ತಂಬಾಕು ಮತ್ತು ಮದ್ಯದಂತಹ ಮಾದಕ ವಸ್ತುಗಳಿಂದ ದೂರವಿರಿ.

 

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...