Kannada Duniya

ಪ್ರೋಟೀನ್ ಅತಿಯಾದ ಸೇವನೆ ಹೃದ್ರೋಗಕ್ಕೆ ಕಾರಣವಾಗಬಹುದೇ?

ಪೋಷಕಾಂಶಗಳು ದೇಹವನ್ನು ಆರೋಗ್ಯವಾಗಿಡುತ್ತದೆ. ಮತ್ತು ದೇಹ ಸರಿಯಾದ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತವೆ. ಅಂದಮಾತ್ರಕ್ಕೆ ಯಾವುದೇ ಪೋಷಕಾಂಶಗಳನ್ನು ಅತಿಯಾಗಿ ಸೇವಿಸಬಾರದು. ಇದರಿಂದ ಸಮಸ್ಯೆಯಾಗುತ್ತದೆ. ಹಾಗಾದ್ರೆ ಪ್ರೋಟೀನ್ ಅತಿಯಾದ ಸೇವನೆ ಹೃದ್ರೋಗಕ್ಕೆ ಕಾರಣವಾಗುತ್ತದೆಯೇ? ಎಂಬುದನ್ನು ತಿಳಿಯಿರಿ.

ಸಂಶೋಧಕರ ಪ್ರಕಾರ, ಹೆಚ್ಚು ಪ್ರೋಟೀನ್ ಸೇವಿಸಬಾರದಂತೆ. ಇದರಿಂದ ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹವಾಗುತ್ತದೆ. ಮತ್ತು ಅತಿಯಾದ ಪ್ರೋಟೀನ್ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಸಕ್ರಿಯವಾಗುತ್ತದೆ. ಇದರಿಂದ ರಕ್ತ ಹೆಪ್ಪುಗಟ್ಟಲು ಪ್ರಾರಂಭವಾಗುತ್ತದೆ. ಇದರಿಂದ ಅಪಧಮನಿಗೆ ಹಾನಿಯಾಗುತ್ತದೆ.

ಹಾಗಾಗಿ ಪ್ರೋಟೀನ್ ಅನ್ನು ಮಿತವಾಗಿ ಸೇವಿಸಿ. ಸಂಶೋಧಕರ ಪ್ರಕಾರ ಒಬ್ಬ ವ್ಯಕ್ತಿ ದಿನಕ್ಕೆ ಶೇಕಡಾ22ಕ್ಕಿಂತ ಹೆಚ್ಚು ಪ್ರೋಟೀನ್ ಸೇವಿಸಬಾರದಂತೆ. ಹಾಗಾಗಿ ಹಾಲು, ಮೊಟ್ಟೆ, ಮಾಂಸ ಇತ್ಯಾದಿಗಳಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಕಾರಣ ಇವುಗಳನ್ನು ಮಿತವಾಗಿ ಸೇವಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...