Kannada Duniya

ಈ ವಿಟಮಿನ್ ಅತಿಯಾದ ಸೇವನೆ ಹೃದಯಾಘಾತಕ್ಕೆ ಕಾರಣವಾಗುತ್ತದೆಯಂತೆ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಅಲ್ಲದೇ ಹೆಚ್ಚಿನ ಸಂಖ್ಯೆಯ ಜನರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಹೃದಯಾಘಾತಕ್ಕೆ ಹಲವು ಕಾರಣಗಳಿವೆ. ಆದರೆ ಈ ವಿಟಮಿನ್ ಅತಿಯಾಗಿ ಸೇವಿಸಿದರೆ ಹೃದಯಾಘಾತ ಸಂಭವಿಸುತ್ತದೆಯಂತೆ.

ನಮ್ಮ ದೆಹದಲ್ಲಿ ವಿಟಮಿನ್ ಬಿ3 ಅತಿಯಾದರೆ ಅದರಿಂದ ಹೃದಯಾಘಾತ ಸಂಭವಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಇದು ಅಪಧಮನಿಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆಯಂತೆ. ಅಲ್ಲದೇ ಇದರ ಅತಿಯಾದ ಸೇವನೆಯಿಂದ ಹೃದಯದ ರಕ್ತನಾಳದ ಕಾಯಿಲೆಗಳು ಶುರುವಾಗುತ್ತದೆಯಂತೆ.

ಹಾಗಾಗಿ ಈ ವಿಟಮಿನ್ ಬಿ3 ಚಿಕನ್ ಸ್ತನ, ಹಸಿರು ಬಟಾಣಿ, ಅಣಬೆಗಳು, ಕಡಲೆಕಾಯಿ, ಬೀಜಗಳು ಮುಂತಾದವುಗಳಲ್ಲಿ ಕಂಡುಬರುತ್ತದೆಯಂತೆ. ಅಲ್ಲದೇ ವಿಟಮಿನ್ ಬಿ3 ದೇಹದಲ್ಲಿನ ಅನೇಕ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಜೀವಕ್ಕೆ ಹಾನಿಯಾಗಬಹುದು ಎನ್ನಲಾಗಿದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...