Kannada Duniya

‘ಹಿಮೋಗ್ಲೋಬಿನ್’ ಹೆಚ್ಚಿಸಲು ಮನೆಮದ್ದುಗಳು ….!

ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾದಾಕ್ಷಣ ದೇಹ ದುರ್ಬಲವಾಗುತ್ತದೆ. ಪರಿಣಾಮ ಹಲವು ರೋಗಗಳು ದೇಹವನ್ನು ಆವರಿಸಿಕೊಳ್ಳುತ್ತವೆ. ಹಾಗಾದರೆ ಮನೆ ಮದ್ದುಗಳ ಮೂಲಕ ದೇಹದ ರಕ್ತದ ಪ್ರಮಾಣವನ್ನು ಹೆಚ್ಚಿಸುವುದು ಹೇಗೆ?

ದೇಹದಲ್ಲಿ ರಕ್ತದ ಅಂಶವನ್ನು ಹೆಚ್ಚಿಸಲು ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ನಿತ್ಯ ಸೊಪ್ಪು ತರಕಾರಿಗಳನ್ನು ಸೇವಿಸಿ. ಬಸಳೆ, ಪಾಲಕ್ ಸೊಪ್ಪುಗಳಲ್ಲಿ ಕಬ್ಬಿಣಾಂಶ ಹೇರಳವಾಗಿರುವುದು ಮಾತ್ರವಲ್ಲ ಹಿಮೋಗ್ಲೋಬಿನ್ ಪ್ರಮಾಣವನ್ನು ಇದು ಹೆಚ್ಚಿಸುತ್ತದೆ. ಹಾಗಾಗಿ ವಾರದಲ್ಲಿ ಮೂರು ದಿನ ಸೊಪ್ಪು ಸೇವಿಸಿ.

Soaked foods: ರಾತ್ರಿಯಿಡಿ ನೆನೆಸಿಟ್ಟ ಈ ವಸ್ತುಗಳನ್ನು ಸೇವಿಸಿದರೆ ಕಾಯಿಲೆ ನಿಮ್ಮ ಬಳಿ ಸುಳಿಯುವುದಿಲ್ಲ…!

ಒಣಹಣ್ಣುಗಳ ಪೈಕಿ ದ್ರಾಕ್ಷಿ ಹೆಚ್ಚಾಗಿ ಸೇವಿಸಿ. ಹಿಂದಿನ ರಾತ್ರಿ ನೀರಿನಲ್ಲಿ ನೆನೆಸಿಟ್ಟ ದ್ರಾಕ್ಷಿಯನ್ನು ಮರುದಿನ ಬೆಳಗ್ಗೆ ನೀರು ಸಮೇತವಾಗಿ ಸೇವಿಸುವುದರಿಂದ ಹದಿನೈದು ದಿನದೊಳಗೆ ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ.

ಚಹಾ ಕಾಫಿ ತಯಾರಿ ವೇಳೆ ಸಕ್ಕರೆ ಬಳಸುವ ಬದಲು ಬೆಲ್ಲ ಸೇರಿಸಿ. ಹಣ್ಣುಗಳ ಪೈಕಿ ದಾಳಿಂಬೆ ಹೆಚ್ಚು ಸೇವಿಸಿ. ಬಾಳೆಹಣ್ಣು ಕೂಡಾ ಒಳ್ಳೆಯದೇ. ವಾರದಲ್ಲಿ ಮೂರು ಬಾರಿ ಬೀಟ್ ರೂಟ್ ತಿನ್ನಿ. ವಾರಕ್ಕೆರಡು ಎಳನೀರು ಕುಡಿಯಿರಿ. ಇವೆಲ್ಲವೂ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...